ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ 6 ವರ್ಷದ ಮುಸ್ಲಿಂ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದವರು ಬಂಗಾರಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಘವೇಂದ್ರ (37) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದರು.
ಘಟನೆಯ ಹಿನ್ನೆಲೆ
ಮೂರು ದಿನದ ಹಿಂದೆ ಅಮ್ರೀನ್ ತಾಜ್, ಮುನೀರ್ ಅಹ್ಮದ್ ದಂಪತಿಗಳು ತಮ್ಮ ಮೂರು ಜನ ಮಕ್ಕಳನ್ನು ಮನೆಗೆ ದಿನಸಿ ಸಾಮಾನು ತರಲು ಬೆಳಗ್ಗೆ 9:30ಕ್ಕೆ ಅಂಗಡಿಗೆ ಕಳಿಸಿದ್ದರು. ಮಕ್ಕಳು ಅಂಗಡಿಗೆ ಹೋದಾಗ ಅಂಗಡಿ ಮಾಲೀಕನು ಇಬ್ಬರು ಗಂಡು ಮಕ್ಕಳನ್ನು ಕೈನಿಂದ ಹೊಡೆದು ಓಡಿಸಿ, 6 ವಯಸ್ಸಿನ ಪುಟ್ಟ ಕಂದಮ್ಮಳನ್ನು ಅಲ್ಲಿಯೇ ಹಿಡಿದಿಟ್ಟುಕೊಂಡು ಹೊಡೆದು ಅತ್ಯಾಚಾರ ವೆಸಗಿರುತ್ತಾನೆ. ನಂತರ ಬಾಲಕಿ ಹೊಟ್ಟೆ ನೋವೆಂದು ಅಳುತ್ತಾ ಮನೆಗೆ ಬಂದಾಗ ತಾಯಿ ಅದನ್ನು ಗಮನಿಸದೇ ಮನೆ ಕೆಲಸಕ್ಕೆ ಟೈಮ್ ಆಯ್ತು ಎಂದು ಮಕ್ಕಳನ್ನು ಶಾಲೆಗೆ ಕಳಿಸಿ ಹೊರಟಿರುತ್ತಾರೆ. ಶಾಲೆಯಲ್ಲಿ ಮಗುವಿಗೆ ರಕ್ತಸ್ರಾವ ಆಗುತ್ತಿದ್ದುದನ್ನು ಕಂಡ ಶಿಕ್ಷಕಿ ತಾಯಿಗೆ ಫೋನ್ ಮಾಡಿ ತಾಯಿ ಜೊತೆ ಮಗಳನ್ನು ಮನೆಗೆ ಕಳಿಸಿರುತ್ತಾರೆ. ತಾಯಿ ಕೆಲಸದ ಒತ್ತಡದಿಂದಾಗಿ ಮಗುವನ್ನು ಗಮನಿಸದೇ ತನ್ನ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾರೆ. ಮನೆಗೆ ಬಂದ ಮೇಲೆ ರಾತ್ರಿ ಮತ್ತೊಮ್ಮೆ ಮಕ್ಕಳನ್ನು ದಿನಸಿ ಸಾಮಾನು ತರಲು ಅಂಗಡಿಗೆ ಕಳಿಸಿದ್ದಾರೆ. ಮತ್ತೊಮ್ಮೆ ಅಂಗಡಿ ಮಾಲೀಕ ಇಬ್ಬರು ಗಂಡು ಮಕ್ಕಳನ್ನು ಹೊಡೆದು ಓಡಿಸಿ ಬಾಲಕಿಯನ್ನು ಮನೆಯ ಹಿತ್ತಲಲ್ಲಿ ಜನ ನಿಬಿಡ ಪ್ರದೇಶಕ್ಕೆ ಹೊತ್ತೊಯ್ತು ಅತ್ಯಾಚಾರ ಎಸಿಗಿದ್ದಾನೆ. ನಂತರ ಬಾಲಕಿ ತೀವ್ರ ರಕ್ತಸ್ರಾವದಿಂದ ಅಳುತ್ತಾ ಮನೆಗೆ ಬಂದಾಗ ಗಮನಿಸಿದ ಪೋಷಕರು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಡಾಕ್ಟರ್ ಪರೀಕ್ಷಿಸಿ ಅತ್ಯಾಚಾರ ದೃಢಪಟ್ಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮುಸ್ಲಿಂ ಸಮುದಾಯ ಸಿಟ್ಟಿಗೆದ್ದು ನೂರಾರು ಮಂದಿ ರಸ್ತೆ ತಡೆ, ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿ, ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಗಾರಪೇಟೆಯಲ್ಲಿ ಕೆಲವು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ವರದಿ ಮಾಡಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಶಾಸಕ ನಾರಾಯಣಸ್ವಾಮಿ ಭೇಟಿ ನೀಡಿ ಪ್ರತಿಭಾಟಣಕಾರರ ಜೊತೆ ಚರ್ಚಿಸಿದರು. ಆಮೇಲೆ ಕೆಜಿಎಫ್ ಎಸ್ಪಿ ಜೊತೆಗೆ ಮಾತನಾಡಿ ಆರೋಪಿಯನ್ನು ವಶಕ್ಕೆ ಪಡೆದ ನಂತರ ಪ್ರತಿಭಟನಾಕಾರರು ವಾಪಸ್ ಹಿಂದಿರುಗಿದ್ದಾರೆ.



Add comment