ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಸೇರಿದಂತೆ ಕೆಲವು ಡಿಜಿಟಲ್ ಪಾವತಿ ವಿಧಾನಗಳ ಮೇಲೆ ಶುಲ್ಕ ವಿಧಿಸಲು ಅವಕಾಶ ಮಾಡಿಕೊಡುವ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದೆ. ‘ ಪೇಮೆಂಟ್ ಅಂಡ್ ಸೆಟಲ್ಮೆಂಟ್ ಸಿಸ್ಟಮ್ ಕಾಯ್ದೆ 2007’, ‘ಆದಾಯ ತೆರಿಗೆ ಕಾಯ್ದೆ 2025’ ಮತ್ತು ‘ಹಣಕಾಸು ಕಾಯ್ದೆ 2026’ ಗಳಿಗೆ ತಿದ್ದುಪಡಿ ತರುವ ಉದ್ದೇಶದ ಈ ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಇದನ್ನು ಅಂಗೀಕರಿಸಲಾಯಿತು.
ಲೋಕಸಭೆಯಲ್ಲಿ ಅಂಗೀಕರಿಸಲಾದ ತಿದ್ದುಪಡಿ ಮಸೂದೆಯ ಪ್ರಕಾರ, ಕೇಂದ್ರ ಸರ್ಕಾರವು ಸೂಚಿಸುವ ನಿರ್ದಿಷ್ಟ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ಶುಲ್ಕವನ್ನು ವಿಧಿಸಬಹುದು. ಎಲೆಕ್ಟ್ರಾನಿಕ್ ಪಾವತಿಗಳನ್ನು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕಗಳಿಂದ ವಿನಾಯಿತಿ ನೀಡುವ ಪ್ರಸ್ತುತ ನಿಯಮದಲ್ಲಿ ಬದಲಾವಣೆಗಳನ್ನು ಸರ್ಕಾರವು ಪ್ರಸ್ತಾಪಿಸಿದೆ.
ಈ ಮಸೂದೆಯು ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲ್ಪಟ್ಟಿತು. ಪ್ರಸ್ತುತ, ಯುಪಿಐ (UPI) ನಂತಹ ಡಿಜಿಟಲ್ ಪಾವತಿ ವಿಧಾನಗಳ ಮೇಲೆ ಯಾವುದೇ ಶುಲ್ಕಗಳಿಲ್ಲ. ಆದರೆ, ಪ್ರಸ್ತಾವಿತ ಕಾಯ್ದೆಯ ತಿದ್ದುಪಡಿಯಿಂದ ಕೇಂದ ಸರ್ಕಾರ ಅಧಿಸೂಚನೆಯ ಮೂಲಕ ನಿರ್ಧರಿಸುವ ನಿರ್ದಿಷ್ಟ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಶುಲ್ಕಗಳನ್ನು ವಿಧಿಸಬಹುದಾಗಿದೆ.


Leave a reply