ಜಾರ್ಖಂಡ್ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ, ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ (AISA) ಅಧ್ಯಕ್ಷೆ ನೇಹಾ ಬೋರಾ ಅವರ ಮೇಲೆ ‘ಇಂಕ್’ ದಾಳಿ ನಡೆದಿದೆ. ಶುಕ್ರವಾರದಂದು, ರಾಂಚಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಜಾರ್ಖಂಡ್ ವಿಧಾನಸಭೆಯತ್ತ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬ ಅವರ ಮೇಲೆ ಇಂಕ್ ಎರಚಿದ್ದಾನೆ.
ರಾಂಚಿ : ಜಾರ್ಖಂಡ್ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ, ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ (AISA) ಅಧ್ಯಕ್ಷೆ ನೇಹಾ ಬೋರಾ ಅವರ ಮೇಲೆ ಇಂಕ್ ದಾಳಿ ನಡೆದಿದೆ. ಶುಕ್ರವಾರದಂದು, ರಾಂಚಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಜಾರ್ಖಂಡ್ ವಿಧಾನಸಭೆಯತ್ತ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬ ಅವರ ಮೇಲೆ ಇಂಕ್ ಎರಚಿದ್ದಾನೆ. ದಾಳಿಕೋರ ನೇಹ ಬೋರಾ ಅವರನ್ನು “ದೇಶದ್ರೋಹಿ” ಎಂದು ಆರೋಪಿಸಿದರು. “ನೇಹಾ ಬೋರಾ ಅವರು ಉಮರ್ ಖಾಲಿದ್ ಅವರ ಬೆಂಬಲಿಗರು. ಹಾಗಾಗಿ ನನಗೆ ಅವರು ಇಷ್ಟವಿಲ್ಲ. ಅವರು ದೇಶದ್ರೋಹಿ ,” ಎಂದು ಅವನು ಮಾಧ್ಯಮಗಳಿಗೆ ತಿಳಿಸಿದ್ದಾರನೆ. ಆ ವ್ಯಕ್ತಿಯು ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು.
ಇದಾದ ನಂತರ , ಈ ದಾಳಿಯಿಂದ ತಾನು ಬೆದರುವುದಿಲ್ಲ ಎಂದು ನೇಹಾ ಬೋರಾ ಹೇಳಿದ್ದಾರೆ. ತಮ್ಮ ಮೇಲೆ ಇಂಕ್ ಎರಚಿದ ವ್ಯಕ್ತಿಯು ಬಿಜೆಪಿ ಬೆಂಬಲಿತ ದುಷ್ಕರ್ಮಿ ಎಂದು ಅವರು ಆರೋಪಿಸಿದ್ದಾರೆ. JPSC ಮತ್ತು JSSC CGL ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಹಾಗೂ ತಕ್ಷಣವೇ ಮರುಪರೀಕ್ಷೆಗಳನ್ನು ನಡೆಸಬೇಕು ಎಂದು ಒತ್ತಾಯಿಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ತಾವು ಆ ರ್ಯಾಲಿಯಲ್ಲಿ ಭಾಗವಹಿಸಿದ್ದಾಗಿ ಅವರು ವಿವರಿಸಿದ್ದಾರೆ. “ದೆಹಲಿ ಪ್ರತಿಭಟನೆಗಳ ವೇಳೆ ಪೆಲೆಟ್ ಗನ್ ದಾಳಿ ಮತ್ತು ಲಾಠಿಚಾರ್ಜ್ಗಳನ್ನು ಎದುರಿಸಿರುವ ನನಗೆ, ನನ್ನ ಮೇಲೆ ಇಂಕ್ ಎರಚುವುದರಿಂದ ಯಾವುದೇ ಭಯವಿಲ್ಲ. ದೇಶಾದ್ಯಂತ ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಮತ್ತು ಯುವಜನರ ಆಕ್ರೋಶವನ್ನು ಇಂಕ್ ದಾಳಿ ಮೂಲಕ ಹತ್ತಿಕ್ಕಬಹುದು ಎಂದು ಅವರು ಭಾವಿಸಿರಬಹುದೇನೋ?” ಎಂದು ಅವರು ಪ್ರಶ್ನಿಸಿದರು.


Leave a reply