ಪಾಟ್ನಾ : ಎನ್ ಡಿಎ ಆಡಳಿತವಿರುವ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ಬಿಹಾರ್ ರಾಜ್ಯದಲ್ಲಿ ಕೇವಲ 14 ದಿನಗಳಲ್ಲಿ ನಡೆದ 50 ಕೊಲೆಗಳು ನಡೆದಿರುವುದನ್ನು ಗಮನಿಸಿದರೆ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು ತೋರಿಸುತ್ತವೆ. ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಕೊಲೆಗಳು ಮತ್ತು ದರೋಡೆಗಳು ನಡೆಯುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಹತ್ಯೆಗಳಿಂದ ರಾಜ್ಯ ತತ್ತರಿಸುತ್ತಿದ್ದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಕೊಲೆಗಳು ಅಷ್ಟೊಂದು ಹೆಚ್ಚಿಲ್ಲ, ಮತ್ತು ಹಿಂದಿನದಕ್ಕೆ ಹೋಲಿಸಿದರೆ ಕಡಿಮೆ ಎಂದು ಡಿಜಿಪಿ ಸಮರ್ಥಿಸಿಕೊಂಡಿದ್ದು ಗಮನಾರ್ಹ.
ಬಂದೂಕು ಹಿಡಿದು ಆಸ್ಪತ್ರೆಗೆ ಪ್ರವೇಶಿಸಿದ ಹಂತಕರು..
ರಾಜಧಾನಿ ಪಾಟ್ನಾದಲ್ಲಿ ಮತ್ತೊಂದು ಕೊಲೆ ಸಂಚಲನ ಸೃಷ್ಟಿಸಿದೆ. ಗುರುವಾರ ಶಾಸ್ತ್ರಿನಗರ ಪ್ರದೇಶದ ಪ್ಯಾರಾಸ್ ಆಸ್ಪತ್ರೆಗೆ ನಾಲ್ವರು ಬೈಕ್ಗಳಲ್ಲಿ ಬಂದರು. ಅವರು ಬಂದೂಕುಗಳನ್ನು ಹಿಡಿದು ಆಸ್ಪತ್ರೆಯನ್ನು ಪ್ರವೇಶಿಸಿದರು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎದುರಾಳಿ ಗ್ಯಾಂಗ್ ಸದಸ್ಯರ ಮೇಲೆ ಗುಂಡು ಹಾರಿಸಿದರು, ಮತ್ತು ನಂತರ ಹೊರಗೆ ಧಾವಿಸಿದರು. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಐಸಿಯುಗೆ ಕರೆದೊಯ್ಯಲಾಯಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಆಸ್ಪತ್ರೆಯಲ್ಲಿ ನಡೆದ ಕೊಲೆಗೆ ಎನ್ಡಿಎ ಪಾಲುದಾರ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಹಾರದಲ್ಲಿ ಕೊಲೆಗಳು ದಿನಚರಿಯಾಗಿವೆ. ಅಪರಾಧಿಗಳ ಆತ್ಮವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆಸ್ಪತ್ರೆಯಲ್ಲಿ ಜನರನ್ನು ಕೊಲ್ಲುವ ಮೂಲಕ ಅಪರಾಧಿಗಳು ಶಾಂತಿ ಮತ್ತು ಭದ್ರತೆಗೆ ಸವಾಲು ಹಾಕಿದ್ದಾರೆ ಎಂದು ಅವರು ಹೇಳಿದರು. ಬಿಹಾರದಲ್ಲಿ ನಡೆದ ಹತ್ಯೆಗಳ ಬಗ್ಗೆ ಪಾಸ್ವಾನ್ ಪ್ರತಿಕ್ರಿಯಿಸುತ್ತಿರುವುದು ಈ ತಿಂಗಳಲ್ಲಿ ಇದು ಎರಡನೇ ಬಾರಿ. ಈ ತಿಂಗಳ 12 ರಂದು ರಾಜ್ಯದ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ಅವರು, ಈ ಹತ್ಯೆಗಳಿಗೆ ಇನ್ನೂ ಎಷ್ಟು ಬಿಹಾರಿಗಳು ಬಲಿಯಾಗಬೇಕು ಎಂದು ಪ್ರಶ್ನಿಸಿದರು.


Add comment