ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರ ತವರುಮನೆ, ಗುಜರಾತ್ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ. ಆದರೂ ಅದು ಹಸಿವಿನಿಂದ ನರಳುತ್ತಿದೆ ಎಂದು ನೀತಿ ಆಯೋಗ್ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ NITI ಆಯೋಗ್ ಬಿಡುಗಡೆ ಮಾಡಿದ 2023-24ರ ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ವರದಿಯ ಪ್ರಕಾರ, ಹಸಿವಿನ ವಿರುದ್ಧ ಹೋರಾಡಲು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟುವಲ್ಲಿ ರಾಜ್ಯವು ಅತ್ಯಂತ ಹಿಂದುಳಿದಿದೆ. ಇದರ ಪ್ರಕಾರ ಹಸಿವಿನ ಸೂಚ್ಯಂಕದಲ್ಲಿ ಗುಜರಾತ್ 25ನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಐದು ವರ್ಷದೊಳಗಿನ ಶೇ.39.7ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಕಡಿಮೆ ತೂಕವನ್ನು ಹೊಂದಿದ್ದಾರೆ. ಯಾರೂ ಹಸಿವಿನಿಂದ ಇರಬಾರದು ಎಂಬ ಗುರಿಯನ್ನು ವಿಶ್ವಸಂಸ್ಥೆ ಆದೇಶಿಸಿದೆ. 2015 ರಲ್ಲಿ, ವಿಶ್ವ ಸಂಸ್ಥೆ ಒಟ್ಟು 17 ಗುರಿಗಳನ್ನು ನಿಗದಿಪಡಿಸಿತು. ಆದರೆ ಹಸಿವಿನ ಸೂಚ್ಯಂಕದಲ್ಲಿ ಗುಜರಾತ್ ಗಳಿಸಿದ್ದು ಕೇವಲ 41 ಅಂಕಗಳು ಮಾತ್ರವೇ. ಒಡಿಶಾ, ಮಧ್ಯಪ್ರದೇಶ ಸೇರಿ 23 ರಾಜ್ಯಗಳಿಗಿಂತಲೂ ಹಸಿವಿನ ಹೋರಾಟದಲ್ಲಿ ಹಿಂದೆ ಬಿದ್ದಿದೆ.
ಹಸಿವಿನ ಸೂಚ್ಯಂಕದಲ್ಲಿ, ಗುಜರಾತ್ 2020-21ರಲ್ಲಿ 46 ಅಂಕಗಳನ್ನು ಮತ್ತು 2019-20ರಲ್ಲಿ 41 ಅಂಕಗಳನ್ನು ಗಳಿಸಿದೆ. 2018 ರಲ್ಲಿ 49 ಅಂಕಗಳನ್ನು ಗಳಿಸಿತ್ತು. ಹಸಿವಿನ ವಿರುದ್ಧದ ಹೋರಾಟದಲ್ಲಿ ಗುಜರಾತ್ ಅತ್ಯಂತ ಹಿಂದುಳಿದಿರುವುದನ್ನು ಇದು ತೋರಿಸುತ್ತದೆ. ಐದು ವರ್ಷದೊಳಗಿನ ಶೇಕಡಾ 39 ರಷ್ಟು ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. 15 ರಿಂದ 49 ವರ್ಷ ವಯಸ್ಸಿನ ಶೇ 62.5 ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮತ್ತು ಅದೇ ವಯಸ್ಸಿನ ಶೇ. 25.2 ರಷ್ಟು ಮಹಿಳೆಯರು ಬಾಡಿ ಮಾಸ್ ಇಂಡೆಕ್ಸ್ (BMI) 18.5 ಕ್ಕಿಂತ ಕಡಿಮೆ ಹೊಂದಿದ್ದಾರೆ ಎಂದು NITI ಆಯೋಗ್ ವರದಿ ಹೇಳುತ್ತಿದೆ.
2018 ಮತ್ತು 2019 ಕ್ಕೆ ಹೋಲಿಸಿದರೆ, ದುರ್ಬಲಗೊಳ್ಳುತ್ತಿರುವ ಮಕ್ಕಳು ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಗುಜರಾತ್ನ ಹಸಿವಿನ ಸೂಚ್ಯಂಕವು 2020-21 ರಲ್ಲಿ 46 ಪಾಯಿಂಟ್ಗಳಿಂದ 2023-24 ರಲ್ಲಿ 41 ಪಾಯಿಂಟ್ಗಳಿಗೆ ಕುಸಿದಿದೆ. 39.7 ರಷ್ಟು ಐದು ವರ್ಷದೊಳಗಿನ ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. 62.5 ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 2030ರ ವೇಳೆಗೆ ಹಸಿವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸಾಧಿಸಬೇಕಾದರೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವತ್ತ ಗಮನ ಹರಿಸಬೇಕಾದ ತುರ್ತು ಅಗತ್ಯವಿದೆ.
ಅದಕ್ಕಾಗಿ ಅಗತ್ಯ ಹೂಡಿಕೆ ಮಾಡಬೇಕು ಎಂದು ಅಹಮದಾಬಾದ್ ನ ಶಿಕ್ಷಣ ತಜ್ಞ ಆತ್ಮನ್ ಶಾ ಸಲಹೆ ನೀಡಿದರು. 2023 ರಲ್ಲಿ ದೇಶದ ಬಡತನದ ಕುರಿತು ನೀತಿ ಆಯೋಗವು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಗುಜರಾತ್ನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆಯ ಅರ್ಧದಷ್ಟು (ಶೇ. 44.45) ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಶೇ 28.97 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.


Leave a reply