100 ಗ್ರಾಂ ತೂಕ ಹೆಚ್ಚಾಗಿದ್ದಾರೆಂದು ಒಲಿಂಪಿಕ್ ಸಂಸ್ಥೆ ವಿನೇಶ್ ಫೋಗಟ್ ರನ್ನು ಅನರ್ಹಗೊಳಿಸಿದ್ದರಿಂದ ಅವರು ಒಲಿಂಪಿಕ್ಸ್ನ ಫೈನಲ್ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದರಿಂದ ಭಾರತೀಯ ಅಥ್ಲೀಟ್ಗಳು ಹಾಗೂ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಗಂಟೆಗಳಲ್ಲೇ ವಿನೇಶ್ ಫೋಗಟ್ ಎರಡು ಕೆಜಿಯಷ್ಟು ತೂಕ ಹೆಚ್ಚಾಗಿದ್ದಾದರೂ ಹೇಗೆ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ರಾತ್ರೋರಾತ್ರಿ ಅವರ ತೂಕ ಹೆಚ್ಚಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ತೂಕ ಹೆಚ್ಚಾಗಿದೆ ಎಂದರೆ.. ವಿನೇಶ್ ಸೇವಿಸಿದ ಆಹಾರದಿಂದಲೇ ಆಗಿರುತ್ತದೆ. ಈ ಸಮಯದಲ್ಲಿ ವಿನೇಶ್ ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂದು ಅವರ ಕೋಚ್ ನಿಗಾ ವಹಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಗಳು ಬರುತ್ತಿವೆ. ಕೋಚ್ ನಿಗಾವಹಿಸದ ಕಾರಣ ಹೀಗೆ ನಡೆದಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Add comment