ಹೌದೌದು….
ಮಣಿಪುರವೆ ಆಗಲಿ
ಪ್ಯಾಲೇಸ್ತಿನೇ ಆಗಲಿ
ನಮ್ಮ ಮೋದಿ ಸದಾ ಶಾಂತಿಪ್ರಿಯರು…
ಇಲ್ಲಿ
ಬೇಟೆಗಾರನನ್ನು ತಬ್ಬಿಕೊಳ್ಳುತ್ತಾರೆ…
ಅಲ್ಲಿ
ಬೇಟೆಯ ಜೊತೆಗೂ ಕಣ್ಣೀರಿಡುತ್ತಾರೆ….
ಅಲ್ಲಿ
ಕುಕಿಗಳ ಮೇಲೆ
ಮೈತಿ ಬಾಂಬು ಹಾಕಿದ..
ಮಣಿಪುರದ
ಮುಖ್ಯಮಂತ್ರಿಯನ್ನೂ
ಸನ್ಮಾನಿಸುತ್ತಾರೆ…
ಇಲ್ಲಿ
ಬಲಿಯಾದ ಕುಕಿಗಳಿಗೆ
‘ಮೌನ ಶ್ರದ್ಧಾಂಜಲಿ’ಯನ್ನೂ
ಅರ್ಪಿಸುತ್ತಾರೆ…
ಒಂದೆಡೆ
ಕುಕಿಗಳೆದುರು ಶಾಂತಿಗೆ ಪಣ ತೊಡುತ್ತಾರೆ..
ಮತ್ತೊಂದೆಡೆ
ಸಂಘಿಗಳ ದತ್ತುಪುತ್ರ ಮೈತಿಗಳ
ವಿಕೃತ ವಿಧ್ವಂಸಕ್ಕೆ ಮೌನವಹಿಸುತ್ತಾರೆ!
ಅಲ್ಲಿ
ಸಾರ್ವಭೌಮಿ ಪ್ಯಾಲೇಸ್ತಿನಿಗೆ
ಓಟು ಹಾಕುತ್ತಾರೆ..
ಇಲ್ಲಿ
ಪ್ಯಾಲೇಸ್ತಿನನ್ನು ಭೂಪಟದಿಂದಲೇ ಅಳಿಸುತ್ತಿರುವ ನರಮೇಧಿ ಇಸ್ರೇಲಿನ ಜೊತೆ
ವಿನಾಶಕಕ ಒಪ್ಪಂದಕ್ಕೆ ಸಹಿ ಹಾಕುತ್ತಾರೆ..
ಇಲ್ಲಿ
ಸಾವರ್ಕರ್ ವಾದಿ
ಅಂತರ್ಯುದ್ಧವೆನ್ನುತ್ತಾರೆ
ಅಲ್ಲಿ
ಶಾಂತಿವಾದಿ ಬುದ್ಧನೆನ್ನುತ್ತಾರೆ…
ಹೌದೌದು
ನಮ್ಮ ಮೋದಿ…
ಟ್ರಂಪ್ ಯುಗದ ವಿಶ್ವಮಾನ್ಯ ಶಾಂತಿಕೋರರು..
ವಿಷವನ್ನು ಅಮೃತವೆಂದು
ವಿಧ್ವಂಸವನ್ನು ವಿಕಾಸವೆಂದು
ಯುದ್ಧವನ್ನು ಶಾಂತಿಯೆಂದು
ಸಾವರ್ಕರ್ ಅನ್ನು ಬುದ್ಧನೆಂದು
ಬಿಂಬಿಸಬಲ್ಲ..
ಆಧುನಿಕ ಆರ್ಯ ದಾರ್ಶನಿಕರು
ಈ ಕಾಲದ ಪುಶ್ಯಮಿತ್ರಾ ಶುಂಗರು!
- ಶಿವಸುಂದರ್
ಜನಪರ ಚಿಂತಕರು, ಲೇಖಕರು…


Leave a reply