ಅಸ್ತಿಪಂಜರಗಳ ಫಿರ್ಯಾದು!
ಮುಂಡಾಸು ಧರಿಸಿದ
ಅಪರಾಧಿಗಳಿಗೆ
ಮುಜರೆ ಸಲ್ಲಿಸುವ
ಮಂತ್ರಿ ಮಂಡಲಗಳು ರದ್ದಾಗಲಿ..
ದುಶ್ಯಾಸನ ದೌರ್ಜನ್ಯ ವನ್ನು
ಶಿಕ್ಷೆಸದೆ..
ದ್ರೌಪತಿಯ ಪಾವಿತ್ರ್ಯಕ್ಕೆ
ಪುರಾವೆ ಕೇಳುವ
ನ್ಯಾಯಸಂಹಿತೆ ನಾಶವಾಗಲಿ..
ಅರಸರ ದೌರ್ಜನ್ಯವನ್ನು
ಅನುಕಂಪದಿಂದಲೂ..
ಬಡಪಾಯಿಗಳ ದೂರನ್ನು
ಅನುಮಾನದಿಂದಲೂ ಕಾಣುವ
ನಾಗರಿಕ ಸನ್ನದು
ನೇಣು ಹಾಕಿಕೊಳ್ಳಲಿ….
ಧರ್ಮಾಧಿಕಾರ ಮೇಲೆ
ಜನಾಧಿಕಾರ ಜಯಿಸಲಿ
- ಶಿವಸುಂದರ್
ಜನಪರ ಚಿಂತಕರು, ಲೇಖಕರು…



Leave a reply