ಆಹಾರವೇ ಆರೋಗ್ಯ ಎನ್ನುತ್ತಾರೆ. ವಿದೇಶಗಳಲ್ಲಿ ಕೆಲವು ಆಹಾರವನ್ನು ಸೂಪರ್ ಫುಡ್ ಎನ್ನುತ್ತಾರೆ. ಈ ಕಾರಣದಿಂದಾಗಿ ಅವು ಎಷ್ಟೇ ದುಬಾರಿಯಾದರೂ ಭಾರತೀಯರು ಕೂಡ ಅವುಗಳನ್ನು ಖರೀದಿಸಿ ತಿನ್ನುತ್ತಾರೆ. ಆದರೆ ವಿದೇಶಿ ಆಹಾರಗಳನ್ನೇ ಹಿಂದಕ್ಕೆ ತಳ್ಳುವ ಭಾರತೀಯ ಸೂಪರ್ ಫುಡ್ ಕೆಲವು ಹೀಗಿವೆ…
ಭಾರತೀಯ ಆಹಾರದ ಎದುರು ಫಾರಿನ್ ಸೂಪರ್ ಫುಡ್ ಕೆಲಸಕ್ಕೆಬಾರದು.. ಅವುಗಳೆಂದರೆ….ನುಗ್ಗೆಸೊಪ್ಪು – ಭಾರತ ದೇಶದ ನುಗ್ಗೆಸೊಪ್ಪು ವಿದೇಶಿ ಸೂಪರ್ ಫುಡ್ ನ್ನೇ ಮೀರಿಸುವಷ್ಟು ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ಸಿ, ಇ, ಐರನ್, ಯಾಂಟಿ ಆಕ್ಸಿಡೆಂಟ್ಸ್ ನಂತಹ ಪೋಷಕಾಂಶಗಳು ಹೇರಳವಾಗಿದೆ. ಅಮರಂಥ್ ಅಥವಾ ರಾಜ್ ಗಿರಾ.. ಇತ್ತೀಚೆಗೆ ವೈರಲ್ ಆಗುತ್ತಿರುವ ವಿದೇಶಿ ಫುಡ್ ಕ್ವಿನೋವಾಗೆ ಅಮರಂಥ್ ಉತ್ತಮ ಪರ್ಯಾಯವಾಗಿದೆ. ಇವುಗಳಲ್ಲಿ ಪ್ರೋಟೀನ್ ಫೈಬರ್ ಮತ್ತು ಅಗತ್ಯ ಅಮೈನೋ ಆಮ್ಲಗಳು ಅಧಿಕವಾಗಿವೆ.ತುಳಸಿ – ವೈರಲ್ ಆಗುತ್ತಿರುವ ವಿದೇಶಿ ಮಚ್ಚಾ ಚಹಾದಂತೆ, ತುಳಸಿಯಲ್ಲಿರುವ ಯಾಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಬೆಟ್ಟದ ನೆಲ್ಲಿಕಾಯಿ – ಫಾರಿನ್ ಬೆರ್ರಿ ಹಣ್ಣುಗಳಿಗಿರುವ ಜನಪ್ರಿಯತೆ ಅಷ್ಟಿಷ್ಟು ಅಲ್ಲ. ಆದರೆ ಭಾರತದ ಬೆಟ್ಟದ ನೆಲ್ಲಿಕಾಯಿ ಇದಕ್ಕೆ ಸಾಟಿಯಾಗಿದೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್-ಸಿ ಮತ್ತು ಯಾಂಟಿ ಆಕ್ಸಿಡೆಂಟ್ ಗಳ ಶಕ್ತಿ ಕೇಂದ್ರವಾಗಿದೆ.ಎಳ್ಳು – ಎಳ್ಳಿನ ಬೀಜಗಳು ಚಿಯಾ ಬೀಜಗಳಿಗೆ ಉತ್ತಮ ಪರ್ಯಾಯವಾಗಿದೆ. ಇವುಗಳಲ್ಲಿ ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಯಾಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ.
ಕೊಪ್ಪ : ಪೂರ್ಣಚಂದ್ರ ತೇಜಸ್ವಿಯವರು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿದ್ದ ಸಮಯದಲ್ಲಿ ಬಾಲ್ಯಾವಸ್ಥೆಯಲ್ಲಿದ್ದವರು. ನಂತರ ಇಲ್ಲಿನವರ ಆಡಳಿತದ ಕಾಲದಲ್ಲಿ ಬೆಳೆದು ಪ್ರಭುದ್ದರಾದವರು. ಆ ಕಾಲಘಟ್ಟದ ಆರ್ಥಿಕ, ಸಾಮಾಜಿಕ, ರಾಜಕೀಯ ಆಗುಹೋಗುಗಳು ಹಾಗೂ ತಲ್ಲಣಗಳನ್ನು ಕಂಡುಕೊಂಡು ಬಂದವರು.... Continue reading
ಕೊಪ್ಪ : ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪ ತಾಲ್ಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಬುಧವಾರದಂದು ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಿಂತಕ ನೆಂಪೆ ದೇವರಾಜ್ ಅವರು ಮಾತನಾಡಿ, ‘ಭಾಷೆ ಎನ್ನುವುದು... Continue reading
ಅದ್ಭುತಗಳನ್ನು ವೀಕ್ಷಿಸಲು ಬಯಸುವ ಖಗೋಳ ಪ್ರಿಯರಿಗೆ ಒಳ್ಳೆಯ ಸುದ್ದಿ. ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು ಆಕಾಶದಲ್ಲಿ ಅದ್ಭುತ ದೃಶ್ಯವೊಂದು ತೆರೆದುಕೊಳ್ಳಲಿದೆ. ಅಂದರೆ ನವೆಂಬರ್ 5 ರಂದು ಚಂದ್ರನು ಆಕಾಶದಲ್ಲಿ ಸಾಮಾನ್ಯಕ್ಕಿಂತ ದೊಡ್ಡದಾಗಿ ಮತ್ತು ಮತ್ತಷ್ಟು... Continue reading
GST ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಯನ್ನು ತಂದು ದೇಶದ ಜನರಿಗೆ ಮೋದಿ ಸರ್ಕಾರ ದೀಪಾವಳಿ ಬೋನಸ್ ಕೊಟ್ಟಿದೆ ಎಂಬ ಕಿವಿಗಡಚಕ್ಕುವ ಪ್ರಚಾರವನ್ನು ಕೇಂದ್ರ ಸರ್ಕಾರ ಮತ್ತು ಅದರ ತುತ್ತೂರಿ ಮಾಧ್ಯಮಗಳು ಕಳೆದ ಒಂದು ವಾರದಿಂದ... Continue reading
Leave a reply