ದ್ವೇಷ ಸದಾಕಾಲವೂ ಹೊತ್ತಿ ಉರಿಯುತ್ತಿರಬೇಕು. ಯಾವಾಗಲೂ ವಿನಾಶ ಸಂಭವಿಸುತ್ತಿರಬೇಕು. ಅದು ಸಂಭವಿಸದಿದ್ದರೆ, ಅವರ ಹೃದಯ ಶಾಂತವಾಗಲಾರದು. ಜನರಲ್ಲಿ ನಿರಂತರವಾಗಿ ದ್ವೇಷ-ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಮತಗಳನ್ನು ಗಳಿಸಲು ಯೋಜನೆಗಳನ್ನು ರೂಪಿಸಿದವರು ನಿರಂತರವಾಗಿ ಆ ಕೆಲಸದಲ್ಲಿ ಮುಳುಗಿರುತ್ತಾರೆ. ಇದು ಹಿಂದುತ್ವವಾದಿಗಳ ಕಾರ್ಯಸೂಚಿ. “ಎಲ್ಲಿ ಚುನಾವಣೆಗಳು ನಡೆಯುತ್ತದೆಯೋ! ಎಲ್ಲಿ ಅಧಿಕಾರಕ್ಕಾಗಿ ತಮ್ಮ ತೋಳುಗಳನ್ನು ಚಾಚುವರೋ! ಅಲ್ಲಿ, ಧಾರ್ಮಿಕ ಹಿಂಸಾಚಾರ ಖಂಡಿತವಾಗಿಯೂ ಭುಗಿಲೆಳುತ್ತದೆ. ಉದ್ವಿಗ್ನತೆ ಹೆಚ್ಚಾಗುತ್ತದೆ.” ಅಕ್ಷರಶಃ ಸಂಘಪರಿವಾರದ ಕೇಸರಿ ಭಯೋತ್ಪಾದಕರು ಇದನ್ನೇ ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ; ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಕೋಲ್ಕತ್ತಾದಲ್ಲಿ ನೀಡಿದ ಹೇಳಿಕೆಗಳು.
ಈ ದೇಶದಲ್ಲಿ ಪ್ರಚೋದನಕಾರಿ ಭಾಷಣಗಳು ಹೊಸದೇನೂ ಅಲ್ಲ. ಆದರೆ ಇಂತಹ ಕೃತ್ಯವೆಸಗುವವರಿಗೆ ರಾಜ್ಯವು ಸ್ವತಃ ಬೆಂಬಲಿಸುವುದು, ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸುವುದು ಇತ್ತೀಚೆಗೆ ರೂಢಿಯಾಗಿದೆ. ಆರ್ಎಸ್ಎಸ್ನ ಶತಮಾನೋತ್ಸವದ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ ಎಸ್ ಎಸ್ ಚೀಫ್.. “ಸೂರ್ಯನಿಗೆ ಪೂರ್ವದಲ್ಲಿ ಉದಯಿಸಲು ಸಂವಿಧಾನದ ಮುದ್ರೆ ಹೇಗೆ ಅಗತ್ಯವಿಲ್ಲವೋ…” ಹಾಗೆಯೇ ಹಿಂದೂಸ್ತಾನವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದಕ್ಕೂ ಯಾರ ಅನುಮೋದನೆಯೂ ಅಗತ್ಯವಿಲ್ಲ” ಎಂದು ಅವರು ‘ದೇಶದ ಸಾಂಸ್ಕೃತಿಕ ಅಸ್ತಿತ್ವದ’ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದರು. ಬಿಜೆಪಿಯ ಕನ್ನಡಿಯಲ್ಲಿ ಆರ್ಎಸ್ಎಸ್ ಅನ್ನು ನೋಡಬೇಡಿ ಎಂದು ಹೇಳುತ್ತಾ.. ಅವರು ಮಾತ್ರ, ಆರ್ಎಸ್ಎಸ್ ಕನ್ನಡಿಯಲ್ಲಿ ದೇಶವನ್ನು ನೋಡುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಸ್ವಾತಂತ್ರ್ಯ ಹೋರಾಟದ ಗುರಿಗಳು, ಜನರ ಆಕಾಂಕ್ಷೆಗಳು ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಸಲುವಾಗಿ ಭಾರತದ ಸಂವಿಧಾನವನ್ನು ರಚಿಸಲಾಗಿದೆ. ದೇಶವನ್ನು ವಿವಿಧ ಜನಾಂಗೀಯ ಗುಂಪುಗಳ ಒಕ್ಕೂಟ (ಯೂನಿಯನ್ ಆಫ್ ಇಂಡಿಯಾ) ಎಂದು ಸಂವಿಧಾನ ವಿವರಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನು ಸಂವಿಧಾನದ ಮೂಲ ಆಶಯಗಳೆಂದು ಘೋಷಿಸಲಾಗಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಕಾನೂನುಬದ್ಧಗೊಳಿಸಿದೆ. ಪೌರತ್ವಕ್ಕೆ ಜಾತಿ, ಧರ್ಮ, ಭಾಷೆ ಅಥವಾ ಲಿಂಗದ ಸಂಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಇದು ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ಪ್ರದೇಶಗಳ ಜನರ ಭೂಮಿಗೆ ರಕ್ಷಣೆ ಒದಗಿಸಿದೆ. ದಲಿತರು ಮತ್ತು ಆದಿವಾಸಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹಾಗೂ ಶಾಸನ ಸಭೆಗಳಲ್ಲಿ ತಕ್ಕಮಟ್ಟಿಗೆ ಪ್ರಾತಿನಿಧ್ಯವನ್ನು ವಹಿಸಲು ಮೀಸಲಾತಿಯನ್ನು ಒದಗಿಸಿದೆ. ಸಂಘ ಪರಿವಾರವು ಯಾವಾಗಲೂ ಯಾವುದೇ ಹಿಂಜರಿಕೆಯಿಲ್ಲದೆ ಅಂತಹ ಸಂವಿಧಾನವನ್ನು ಉಲ್ಲಂಘಿಸುವುದು. ಅವಹೇಳನ ಮಾಡುವುದು ಅಂದಿನಿಂದಲೂ ಮಾಡುತ್ತಿದೆ. ವಾಸ್ತವವಾಗಿ, ಅವರು ಬಹಳ ಕಾಲ ಸಂವಿಧಾನವನ್ನು ಸ್ವೀಕರಿಸಲಿಲ್ಲ. ಸ್ವಾತಂತ್ರ್ಯಾನಂತರ, ಆರೆಸ್ಸೆಸ್ ಅವಕಾಶ ಸಿಕ್ಕಾಗಲೆಲ್ಲಾ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ. ಗೋಲ್ವಾಲ್ಕರ್ ನಿಂದ ಹಿಡಿದು ಈಗಿನ ಮೋಹನ್ ಭಾಗವತ್ ವರೆಗೆ, ಎಲ್ಲಾ ನಾಯಕರು ಸಂವಿಧಾನವನ್ನು ಅವಹೇಳನ ಮಾಡುತ್ತಲೇ ಬಂದರು. ಇನ್ನೂ ಕೂಡ ಅದೇ ಕೆಲಸವನ್ನು ಮಾಡುತ್ತಿದ್ದಾರೆ.
ಆರ್ಎಸ್ಎಸ್ ಪ್ರಾರ್ಥನೆಗಳಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಂವಿಧಾನದ ವಿರುದ್ಧ ದ್ವೇಷವನ್ನು ಕಾರುತ್ತಲೇ ಇದೆ. ಸ್ವಾತಂತ್ರ್ಯಕ್ಕೆ ಒಂದು ದಿನ ಮೊದಲು ಬಿಡುಗಡೆಯಾದ ಅವರ ಅಧಿಕೃತ ಪತ್ರಿಕೆ “ಆರ್ಗನೈಸರ್” ನಲ್ಲಿ, ಅವರು ನಮ್ಮ ದೇಶದ ರಚನೆಯ ಮೇಲೆಯೇ ದಾಳಿ ಮಾಡಿದರು. ಹಿಂದೂಸ್ತಾನ್ ಹಿಂದೂಗಳಿಗೆ ಮಾತ್ರ ಸೇರಿದ್ದು ಎಂದು ಅವರು ಆಳವಾಗಿ ನಂಬುತ್ತಾರೆ. ಸಂಘ ಪರಿವಾರವು ಆ ಅಡಿಪಾಯದ ಮೇಲೆ ದೇಶವನ್ನು ನಿರ್ಮಿಸಲು ಆಶಿಸುತ್ತದೆ. ಹಿಂದೂ ಸಂಪ್ರದಾಯಗಳು, ಸಂಸ್ಕೃತಿ, ಪರಿಕಲ್ಪನೆಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಬೇಕು ಎಂಬುದು ಅದರ ಕಲ್ಪನೆ. ಆದ್ದರಿಂದಲೇ ಮೋಹನ್ ಭಾಗವತ್ “ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪಾರ್ಲಿಮೆಂಟ್ ಕಾಯ್ದೆಗಳನ್ನು ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ಆ ಪದವನ್ನು ಸೇರಿಸಿದರೂ, ಇಲ್ಲವೆಂದರೂ ನಮಗೆ ಯಾವುದೇ ಅಭ್ಯಂತರವಿಲ್ಲ” ಎಂಬಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ವಿವಿಧತೆಯಲ್ಲಿ ಏಕತೆ ಹೊಂದಿರುವ ಸಮಾಜದ ಮೇಲೆ ಏಕತೆ ಎಂದು ‘ಧರ್ಮ’ದ ವಿಷವನ್ನು ಸುರಿದಂತೆಯೇ ಅಲ್ಲವೇ?
ಮೋಹನ್ ಭಾಗವತ್ ಹೇಳಿದಂತೆ, ಜಾತ್ಯತೀತ ಭಾರತ ಹಿಂದೂ ರಾಷ್ಟ್ರವಾದರೆ, ಭವಿಷ್ಯದಲ್ಲಿ ಹಲವು ತಲೆಮಾರುಗಳು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದಂತಹ ಪದಗಳನ್ನು ಮರೆತುಬಿಡಬೇಕಾಗುತ್ತದೆ. ಈ ಮೂಲಭೂತ ಅಂಶಗಳನ್ನು ರಕ್ಷಿಸುವುದು ಭಾರತದ ನಾಗರಿಕರ ಜವಾಬ್ದಾರಿಯಾಗಿದೆ. ಆ ಹಿನ್ನೆಲೆಯಿಂದ ಬಂದ ನಮ್ಮ ಪ್ರಧಾನಿಯವರು ಭಾರತೀಯ ಸಂವಿಧಾನವನ್ನು ತೂಗಿ ನೋಡಿದವರೆ. ಅದನ್ನು ತೇಪೆ ಹಚ್ಚುವ ಹೊದಿಕೆ ಎಂದು ಬಣ್ಣಿಸಿದವರೆ. ಆದ್ದರಿಂದ, ರಾಷ್ಟ್ರೀಯ ಚಳವಳಿಯ ಗುರಿಗಳನ್ನು, ಜನರ ಆಕಾಂಕ್ಷೆಗಳನ್ನು ಮತ್ತು ಸಂವಿಧಾನದ ಚೈತನ್ಯವನ್ನು ನಾಶಮಾಡುತ್ತಿರುವ ಇಂತಹ ಫ್ಯಾಸಿಸ್ಟರ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನು ನಡೆಸಲೇಬೇಕಿದೆ. ದೇಶದ ಸಂಪತ್ತು, ದೇಶದ ಅಭಿವೃದ್ಧಿ ಮತ್ತು ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಚಳುವಳಿಗಳೇ ಮಾರ್ಗವಾಗಿದೆ.


Leave a reply