ನೇಪಾಳದಲ್ಲಿ ಜನರು ರೊಚ್ಚಿಗೆದ್ದಿದ್ದಾರೆ. ಪ್ರತಿಭಟನಾಕಾರರು ಇಂದು ಸಂಸತ್ತು ಭವನ ಮತ್ತು ಸುಪ್ರೀಂ ಕೋರ್ಟ್ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನೇಪಾಳಿ ಪ್ರಧಾನಿ ಓಲಿ ರಾಜೀನಾಮೆ ನೀಡಿದ್ದಾರೆ.
ಕಠ್ಮಂಡು : ನೇಪಾಳ ಸಂಸತ್ತು ಬೆಂಕಿಯಲ್ಲಿ ಉರಿಯುತ್ತಿದೆ. ಸ್ಥಳೀಯ ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದರಿಂದ ಆ ದೇಶದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಇಂದು ಬೆಳಗ್ಗೆ ಸಂಸತ್ ಭವನವನ್ನು ಪ್ರವೇಶಿಸಿದ ಪ್ರತಿಭಟನಾಕಾರರು ಕಠ್ಮಂಡುವಿನಲ್ಲಿ ಸಂಸತ್ ಭವನಕ್ಕೆ ಬೆಂಕಿ ಹಚ್ಚಿದ್ದಾರೆ. ಆದ್ದರಿಂದ ಪ್ರಧಾನಿ ಓಲಿ ರಾಜೀನಾಮೆ ನೀಡಿ ಪರಾರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ಮತ್ತು ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದರಿಂದ, ದೇಶಾದ್ಯಂತ ಯುವಕರು ಸಿಟ್ಟಿಗೆದ್ದಿದ್ದಾರೆ.
ನೇಪಾಳದ ಪ್ರಮುಖ ನಗರಗಳಲ್ಲಿ ನಡೆದ ಪ್ರತಿಭಟನೆಗಳು ಅಂತಿಮವಾಗಿ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹರಸಾಹಸ ಪಡುವಂತಾಗಿದೆ. ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರಕ್ಕೆ ಮುಂದಾಗಿದ್ದರಿಂದ ಪ್ರತಿಭಟನಾಕಾರರು ಆಕ್ರೋಶಗೊಂಡರು.
ನೇಪಾಳದ ರಾಜಕೀಯ ಚರಿತ್ರೆಯಲ್ಲೇ ಅತ್ಯಂತ ತೀವ್ರವಾದ ಹೋರಾಟವನ್ನು ಕಂಡಿದೆ. ಇಂದು ಹಲವಾರು ಸಚಿವರು ಹೆಲಿಕಾಪ್ಟರ್ಗಳ ಮೂಲಕ ದೇಶವನ್ನು ತೊರೆದು ಓಡಿದರು. ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ಗೂ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.


Leave a reply