ಮೋದಿ ಬಿಜೆಪಿಗೆ ಆರ್ಎಸ್ಎಸ್ ಮಾರ್ಗದರ್ಶನ ಮಾಡುತ್ತಿದೆಯೇ? ಅಥವಾ ಆರ್ಎಸ್ಎಸ್ ಮೋದಿ ಬಿಜೆಪಿಗೆ ಮಾರ್ಗದರ್ಶನ ನೀಡುತ್ತಿದೆಯೇ? ಇದು ಪ್ರಸ್ತುತ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಕಳೆದ ಒಂದು ತಿಂಗಳಿನಿಂದ ಆರ್ಎಸ್ಎಸ್ ಸಾರ್ ಸಂಘ್ ಚಾಲಕ್ ಮೋಹನ್ ಭಾಗವತ್ ನೀಡಿರುವ ಕೆಲವು ಹೇಳಿಕೆಗಳನ್ನು ಗಮನಿಸಿದರೆ ಹಲವು ಅನುಮಾನಗಳನ್ನು ಹುಟ್ಟಿಕೊಳ್ಳುತ್ತಿವೆ. ಅವರ ಮಾತುಗಳು ರಾಜಕೀಯ ಸಂಚಲನವನ್ನೂ ಸೃಷ್ಟಿಸುತ್ತಿವೆ.
75 ವರ್ಷ ವಯಸ್ಸಿನ ಯಾರಾದರೂ ಸರಿ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಒಂದು ತಿಂಗಳ ಹಿಂದೆ ಭಾಗವತ್ ಸ್ಪಷ್ಟಪಡಿಸಿದ್ದರು. ಈಗ, ಅವರು ಆ ವಿಷಯದ ಬಗ್ಗೆ ಯು-ಟರ್ನ್ ತೆಗೆದುಕೊಂಡಿದ್ದಾರೆ. ಮಾತು ಬದಲಿಸಿದ ರೀತಿಯನ್ನು ಗಮನಿಸಿದರೆ ಯಾರು ಯಾರನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬುದು ಸ್ವಲ್ಪ ಅಸ್ಪಷ್ಟವಾಗಿದೆ ಮತ್ತು ಗೊಂದಲಕಾರಿಯಾಗಿದೆ. ಆರ್ಎಸ್ಎಸ್ ರಚನೆಯಾಗಿ 100 ವರ್ಷಗಳನ್ನು ಪೂರೈಸುತ್ತಿರುವುದರಿಂದ, ಅದರ ಸದಸ್ಯರು ಉತ್ಸವಗಳನ್ನು ಆಚರಿಸುತ್ತಿದ್ದಾರೆ. ಇದರ ಭಾಗವಾಗಿ, ಕೆಲವು ದಿನಗಳ ಹಿಂದೆ, ಅವರು ಹಲವಾರು ದೇಶಗಳ ರಾಯಭಾರಿಗಳೊಂದಿಗೆ ಸಭೆಯನ್ನು ಆಯೋಜಿಸಿದ್ದರು. ಅದರಲ್ಲಿ ಸಂಘದ ಸಿದ್ಧಾಂತವನ್ನು – ಅಖಂಡ ಭಾರತ ದೇಶದ ಅರ್ಥವನ್ನು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ವಿವರಿಸಿದರು.
ಇತ್ತೀಚೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅವರು 75 ವರ್ಷಗಳನ್ನು ಪೂರೈಸಿದ ನಂತರ ನಿವೃತ್ತಿ, ಬಿಜೆಪಿ ಮತ್ತು ಸಂಘದ ನಡುವಿನ ಸಂಬಂಧವನ್ನು ಪ್ರಸ್ತಾಪಿಸಿದರು.
ಆರ್ ಎಸ್ ಎಸ್ ಚೀಫ್ ಮಾತೇ ಶಾಸನ..
ಭಾಗವತ್ ಅವರ ಮಾತುಗಳನ್ನು ಗಮನಿಸಿದರೆ, ಬಿಜೆಪಿ ಆರೆಸ್ಸೆಸ್ನಿಂದ ಹುಟ್ಟಿತ್ತೋ ಅಥವಾ ಆರೆಸ್ಸೆಸ್ ಬಿಜೆಪಿಯಿಂದ ಹುಟ್ಟಿ ಬಂದಿತೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ. ಸೇವಾ ವಲಯದಲ್ಲಿ ಆರ್ಎಸ್ಎಸ್ನ ಹಸ್ತಕ್ಷೇಪವು ನಿರ್ದಿಷ್ಟ ಗುರಿಗಳಿಗೆ ಅನುಗುಣವಾಗಿರುತ್ತದೆ. ಅಂತಹ ಸಂಸ್ಥೆಯ ಮುಖ್ಯಸ್ಥರು ಏನನ್ನಾದರೂ ಹೇಳಿದರೆ, ಅದೇ ಶಾಸನವಾಗುತ್ತದೆ. ಆರ್ಎಸ್ಎಸ್ ಕಳೆದ ಹಲವು ದಶಕಗಳಿಂದ ಈ ಮಾದರಿಯನ್ನು ಮುಂದುವರಿಸಿದೆ. ಆದರೆ, ಕಳೆದ ದಶಕಗಳಿಂದ ಆರ್ಎಸ್ಎಸ್ ದೇಶಕ್ಕೆ ಸಂಬಂಧಿಸಿದ ಕ್ಲಿಷ್ಟಕರ ಪರಿಸ್ಥಿತಿಗಳು, ಸನ್ನಿವೇಶಗಳು ಮತ್ತು ಸಮಸ್ಯೆಗಳು, ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಅನೇಕ ನೀತಿ ನಿರ್ಧಾರಗಳಿಗೆ ಯಾವುದೇ ಪ್ರತಿಕ್ರಿಯೆ ಇಲ್ಲದೇ ಮೌನ ವಹಿಸಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.
ಈ ಹಿನ್ನೆಲೆಯಲ್ಲಿ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಯಾರಾದರೂ 75 ವರ್ಷ ವಯಸ್ಸು ದಾಟಿದ ನಂತರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೆಂದು ಭಾಗವತ್ ಮೊದಲ ಬಾರಿಗೆ ಹೇಳಿದರು. ಆದರೆ, ಈ ತಿಂಗಳ 11 ರಂದು ಭಾಗವತ್ ಅವರಿಗೆ 75 ವರ್ಷ ತುಂಬಲಿದೆ. ಪ್ರಧಾನಿ ಮೋದಿ ಅವರಿಗೆ ಇದೇ ತಿಂಗಳ 17 ರಂದು 75 ವರ್ಷ ವಯಸ್ಸು ತುಂಬಲಿದೆ.
ಚೀಫ್ ಜವಾಬ್ದಾರಿಯನ್ನು ಸ್ವೀಕರಿಸಲು 10 ಮಂದಿ ಅರ್ಹರು ಕ್ಯೂನಲ್ಲಿ…
ಮೋಹನ್ ಭಾಗವತ್ ಅವರು ಹೇಳಿದ್ದು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಎಲ್ಲರಿಗೂ ಅನ್ವಯಿಸುತ್ತದೆ ಎಂಬಂತೆ ಮಾತನಾಡಿದರು. ಭಾಗವತ್ ಅವರ ಮಾತುಗಳು ಎಲ್ಲರ ಗಮನವನ್ನು ಪ್ರಧಾನಿ ಮೋದಿಯವರತ್ತ ಸೆಳೆದವು. ಸೆಪ್ಟೆಂಬರ್ 17 ರಂದು ಮೋದಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ, ಈ ವಿಷಯದ ಬಗ್ಗೆ ಭಾಗವತ್ ಅವರ ಅನಿರೀಕ್ಷಿತ ಧ್ವನಿ ಬದಲಾವಣೆಯು ಅವರ ಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ವಾಸ್ತವವಾಗಿ, 1983 ರಲ್ಲಿ ಬಿಜೆಪಿ ರಚನೆಯಾಗುವ ಮೊದಲು ಮತ್ತು ನಂತರ, ಆರ್ಎಸ್ಎಸ್ ಅದರ ಹಿಂದೆ ಇತ್ತು. ಸಂಘವು ಬಿಜೆಪಿಯನ್ನು ತೆರೆಯ ಹಿಂದಿನಿಂದ ಮುನ್ನಡೆಸುತ್ತಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ರಾಜಕೀಯ ರಂಗದಲ್ಲಿರುವ ಎಲ್ಲರೂ ಹೀಗೆಯೇ ಭಾವಿಸುತ್ತಾರೆ. ಆದರೆ ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ಪ್ರಸ್ತುತ ಪರಿಸ್ಥಿತಿಗಳು ವಭಿನ್ನವಾಗಿ ಕಾಣುತ್ತದೆ.
ಭಾಗವತ್ ಇನ್ನೂ ಮಾತನಾಡುತ್ತಾ.. “ನಾನು ನಿವೃತ್ತಿ ಹೊಂದುತ್ತಿದ್ದೇನೆ ಎಂದು ಯಾರಿಗೂ ಹೇಳಿಲ್ಲ. ಅದೇ ರೀತಿ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಯಾರನ್ನೂ ನಿವೃತ್ತಿ ಹೊಂದುವಂತೆ ನಾನು ಕೇಳಿಕೊಂಡಿಲ್ಲ. ಸಾಮಾನ್ಯವಾಗಿ, ಸಂಘದಲ್ಲಿ ನಿವೃತ್ತಿ ಎಂಬುದೇ ಇಲ್ಲ, ನಾವು ಕೊನೆಯವರೆಗೂ ಸ್ವಯಂಸೇವಕರಾಗಿ ಕೆಲಸ ಮಾಡುತ್ತೇವೆ” ಎಂದರು.
“ಒಂದು ವೇಳೆ ನಾನು ಮುಖ್ಯಸ್ಥನಾಗಿ ನಿವೃತ್ತನಾದರೆ, ಎಲ್ಲಾ ಅರ್ಹತೆಗಳನ್ನು ಹೊಂದಿರುವ ಹತ್ತು ಜನರು ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ, ನಾನು ನಿವೃತ್ತಿ ಹೊಂದಲು ಬಯಸುತ್ತೇನೆ ಎಂದು ಯಾರಿಗೂ ಹೇಳಿಲ್ಲ. ಹೇಳಲು ಸಾಧ್ಯವಿಲ್ಲ” ಎಂದರು.
ಸ್ವಯಂ ಸೇವಕರಾಗಿ ಸಂಘವು ನಿಯೋಜಿಸುವ ಯಾವುದೇ ಕೆಲಸವನ್ನು ನಾವು ನಿರ್ವಹಿಸುತ್ತೇವೆ ಎಂದರು. ಸಂಘವು ರಾಮಮಂದಿರ ಚಳುವಳಿಗೆ ಮಾತ್ರ ಸೀಮಿತವಾಗಿದೆ. ಕಾಶಿ-ಮಥುರಾ ಇತರ ಪ್ರದೇಶಗಳಲ್ಲಿ ನಡೆಯುತ್ತಿರುವ ಚಳುವಳಿಗಳ ಜೊತೆ ಸಂಘಕ್ಕೆ ಯಾವುದೇ ಸಂಬಂಧವಿಲ್ಲ, ಆದರೆ ಈ ಚಳುವಳಿಗಳಲ್ಲಿ ಭಾಗವಹಿಸುವುದು ಯಾವುದೇ ಸ್ವಯಂಸೇವಕ ಸಂಘದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಎಷ್ಟೇ ವಿಭಿನ್ನತೆ ಇದ್ದರೂ ಭಾರತ ದೇಶದಲ್ಲಿ ವಾಸಿಸುವ ಎಲ್ಲರೂ ಭಾರತೀಯರು, ಎಲ್ಲರೂ ಅರಿತು ಬೆರೆತು ಸಹಬಾಳ್ವೆ ನಡೆಸುವುದೇ ಅಖಂಡ ಭಾರತವೆಂದು ಹೇಳಿದರು. ಬಿಜೆಪಿಗೆ ಸಲಹೆಗಳನ್ನು ಮಾತ್ರ ನೀಡುತ್ತೇವೆ, ಆದೇಶಗಳನ್ನಲ್ಲ. ಬಿಜೆಪಿ ಪಕ್ಷದೊಂದಿಗೆ ಯಾವುದೇ ಸಂಘರ್ಷವಿಲ್ಲ. ಆದರೆ, ಹಲವಾರು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಇಬ್ಬರ ನಡುವೆ ಘರ್ಷಣೆಗೆ ಕಾರಣವಾಗುತ್ತಿವೆ ಎಂದು ಭಾಗವತ್ ಹೇಳಿದರು. ಆರ್ಎಸ್ಎಸ್ ನಿರ್ಧಾರಗಳನ್ನು ಬಿಜೆಪಿಯ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೃಪೆ ; ದ ವೈರ್


Leave a reply