ಕೊಪ್ಪ : ಚಿನ್ನರ ಗೆಳೆಯರ ಬಳಗ ಭಂಡಿಗಡಿ ಕೊಪ್ಪದಲ್ಲಿ ಮಲೆನಾಡಿನ ಹಚ್ಚ ಹಸುರಿನ ತಾಣದಲ್ಲಿ ತುಂಗಾ ನದಿಯ ಸುಂದರ ಪರಿಸರದಲ್ಲಿ ಚಿಣ್ಣರಿಗಾಗಿ ಕತ್ತಲ ಹಾಡಿನ ಖ್ಯಾತಿಯ ನಾದಮಣಿ ನಾಲ್ಕೂರು ಅವರ ನಿರ್ದೇಶನದಲ್ಲಿ ಮೇ, 2 ರಿಂದ 6ರವರೆಗೆ “ಭಂಡಿಗಡಿ ಹಸಿರು ಹಬ್ಬ 2025” ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
https://www.facebook.com/share/v/1EaweebiQZ
ಕರ್ನಾಟಕದ ಹೆಸರಾಂತ ರಂಗಕರ್ಮಿಗಳು, ಕಿರುತೆರೆ ನಿರ್ದೇಶಕರು, ಚಿತ್ರನಟರು, ಕೃಷಿಕರು, ಶ್ರಮಿಕರು, ಕಲಾವಿದರು ಈ ಹಸಿರು ಹಬ್ಬದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.
ಈ ಹಸಿರು ಹಬ್ಬದ ಕಾರ್ಯಕ್ರಮಗಳು ಹೀಗಿವೆ..
ರಂಗಕಲೆ, ರಂಗಗೀತೆಗಳು, ನಾಟಕ, ಕಥೆ, ಕವನ, ಒಗಟುಗಳು, ಹರಟೆ, ಹಾಸ್ಯ, ಜೇಡಿಮಣ್ಣಿನ ಆಟಗಳು, ಕೆಸರುಗದ್ದೆಯ ಓಟಗಳು, ಮಣ್ಣಿನಿಂದ ಗೊಂಬೆಗಳನ್ನು ತಯಾರಿಸುವುದು, ಚಿತ್ರಕಲೆ, ನದಿ ತೀರದಲ್ಲೊಂದು ನದಿ ಕುರಿತು ಉಪನ್ಯಾಸ ಇತ್ಯಾದಿಗಳು ನಡೆಯುತ್ತಿವೆ.
https://www.facebook.com/share/v/1FcaPXNQFK
ಸಂಜೆಯಲ್ಲಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಸಹಚಾರಿ ಸಂಸ್ಥೆಯ ಕಲಾವಿಧರಿಂದ ಭರತನಾಟ್ಯದ ಮೂಲಕ ಸಂವಿಧಾನ ಪೀಠಿಕೆ, ಸಹಬಾಳ್ವೆ, ಸಾಮರಸ್ಯವನ್ನು ಮೂಡಿಸುವಂತಹ ನೃತ್ಯವನ್ನು ಪ್ರದರ್ಶಿಸಲಾಯಿತು. ಪವಾಡ ಬಯಲು ಕಾರ್ಯಕ್ರಮ, ಜಾಗೃತಿ ಮೂಡಿಸುವ ಹಾಡುಗಳು, ಕಾರ್ಯಕ್ರಮಗಳು ಮುಂದುವರಿಯುತ್ತಿದೆ.
https://www.facebook.com/share/v/1EWwQwgiHi









Leave a reply