‘ಮನುಷ್ಯ ಪ್ರಕೃತಿಯ ಭಾಗವಾಗಿ ಬದುಕುಳಿಯುತ್ತಾನೆ.’ ಆದ್ದರಿಂದ ಪ್ರಕೃತಿ ಮನುಷ್ಯರ ದೇಹವೇ ಆಗಿದೆ. ಮನುಷ್ಯ ಕುಲ ಉಳಿಯಬೇಕಾದರೆ, ಮನುಷ್ಯ ನಿರಂತರವಾಗಿ ಪ್ರಕೃತಿಯೊಂದಿಗೆ ಸಂವಹನ ನಡೆಸಬೇಕು. ಸಂಬಂಧ ಹೊಂದಿರಬೇಕು. ಮನುಷ್ಯರ ಭೌತಿಕ ಮತ್ತು ಮಾನಸಿಕ ಜೀವನವು ಪ್ರಕೃತಿಯೊಂದಿಗೆ ಹೆಣೆದು ಕೊಂಡಿದೆ ಎಂದು ಹೇಳುತ್ತಿರುವಾಗ, ಪ್ರಕೃತಿಯು ತನ್ನೊಂದಿಗೆ ಸಂಪರ್ಕ ಹೊಂದಿದೆ ಎಂದರ್ಥ, ಏಕೆಂದರೆ ಮನುಷ್ಯರು ಪ್ರಕೃತಿಯ ಒಂದು ಭಾಗ.
‘ಮೀನಿನ’ ಸಾರಾಂಶವೇ ನೀರಿನಲ್ಲಿನ ಅದರ ಅಸ್ತಿತ್ವವೇ ಆಗಿದೆ. ‘ಒಳ್ಳೆಯ ನೀರಿನಲ್ಲಿ ಮೀನು’ ಎಂಬುದರ ಸಾರವೇ ನದಿಯಲ್ಲಿರುವ ನೀರು ಎಂದು. ಮನುಷ್ಯರು ನದಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲು ಪ್ರಾರಂಭಿಸಿದ ನಂತರ, ಅದು ರಾಸಾಯನಿಕಗಳು, ತ್ಯಾಜ್ಯ ವಸ್ತುಗಳು ಮತ್ತು ಕೈಗಾರಿಕೆಗಳಿಂದ ಬರುವ ಲೋಹದ ತುಣುಕುಗಳಿಂದ ಕಲುಷಿತಗೊಂಡಿತು. ನದಿ ಕಲುಷಿತಗೊಂಡ ನಂತರ ಅಥವಾ ಅದರ ನೀರನ್ನು ಇತರ ಉದ್ದೇಶಗಳಿಗಾಗಿ ತಿರುಗಿಸಿದ ನಂತರ, ಮೀನುಗಳು ಬದುಕಲು ಅಗತ್ಯವಾದದು ಇಲ್ಲವಾದ್ದರಿಂದ ವಂಚಿತವಾಗುತ್ತವೆ. ಅಂದರೆ ಮೀನು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.
“ಲಂಡನ್ನಲ್ಲಿರುವ 4.5 ಮಿಲಿಯನ್ ಜನರು ತಮ್ಮ ತ್ಯಾಜ್ಯದಿಂದ ಥೇಮ್ಸ್ ನದಿಯನ್ನು ಕಲುಷಿತಗೊಳಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.” “ಇದರ ಪರಿಣಾಮ ಅತ್ಯಂತ ಘೋರವಾಗಿರುತ್ತದೆ.”
“ಇಡೀ ಸಮಾಜವಾಗಲಿ, ಇಡೀ ದೇಶವಾಗಲಿ, ಭೂಮಿಯ ಮೇಲಿನ ಎಲ್ಲಾ ಸಮಾಜಗಳಾಗಲಿ ಭೂಮಿಯ ಒಡೆಯರಲ್ಲ.” ಅವರು ಮಾಡಬೇಕಾಗಿರುವುದು ಆ ಭೂಮಿಯ ಮೇಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಅದರ ಪ್ರಯೋಜನಗಳನ್ನು ಮಾತ್ರವೇ ಪಡೆಯಬೇಕು. ಈ ಭೂಮಿಯನ್ನು ಅವರ ಮುಂದಿನ ಪೀಳಿಗೆಗೆ ಉತ್ತಮ ಸ್ಥಿತಿಯಲ್ಲಿ ವರ್ಗಾಯಿಸುವುದು ಅವರ ಜವಾಬ್ದಾರಿಯಾಗಿದೆ.
“ಭೂಮಿ ಮತ್ತು ಪ್ರಕೃತಿಯೊಂದಿಗಿನ ಮಾನವ ಸಂಬಂಧಗಳು ತರ್ಕಬದ್ಧ ರೀತಿಯಲ್ಲಿ (ಸಮಾನತಾವಾದಿ ಸಮಾಜದಲ್ಲಿ) ಪುನರ್ ನಿರ್ಮಾಣ ಮಾಡಿದ ನಂತರ, ಗುಲಾಮಗಿರಿ ವ್ಯವಸ್ಥೆ, ಊಳಿಗಮಾನ್ಯ ಪದ್ಧತಿ ಅಥವಾ ಖಾಸಗಿ ಆಸ್ತಿ ಎಂಬ ಅರ್ಥವಿಲ್ಲದ ಅಸಂಬದ್ಧ ತತ್ವವನ್ನು ಅನುಸರಿಸದಿದ್ದರೆ…ಮನುಷ್ಯ ಮತ್ತು ಭೂಮಿಯ ನಡುವೆ ಅನನ್ಯತೆ ಹೆಚ್ಚಾಗುತ್ತದೆ. ಏಕೆಂದರೆ ಈ ವ್ಯವಸ್ಥೆಯಲ್ಲಿ ಭೂಮಿಯನ್ನು ಒಂದು ಸರಕಾಗಿ ಪರಿಗಣಿಸಲಾಗುವುದಿಲ್ಲ!
150 ವರ್ಷಗಳ ಹಿಂದೆ ಕಾರ್ಲ್ ಮಾರ್ಕ್ಸ್ ವಿವಿಧ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ ಮೇಲಿನ ದೃಷ್ಟಿಕೋನಗಳು ಎಷ್ಟು ದೂರದೃಷ್ಟಿಯದ್ದಾಗಿದ್ದವು ಎಂಬುದನ್ನು ನೋಡಿ! ಮಾನವ ಸಮಾಜ ಪ್ರಕೃತಿಯಿಂದ ಬೇರ್ಪಡುವುದರಿಂದ ಉಂಟಾಗುವ ದುಷ್ಪರಿಣಾಮಗಳು ಬೆಳವಣಿಗೆಗಳ ಕುರಿತು, ಮಾರ್ಕ್ಸ್ ಅವರ ಎಚ್ಚರಿಕೆಗಳು ಸ್ಮರಣೀಯವಾದುದು ಎಂಬುದನ್ನು ಇಂದಿನ ಪರಿಣಾಮಗಳು ಸ್ಪಷ್ಟಪಡಿಸುತ್ತವೆ.


Leave a reply