ಕೊಪ್ಪ : “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಕರ್ನಾಟಕ ಸಂಭ್ರಮ – ೫೦ರ ಅಂಗವಾಗಿ ಕನ್ನಡ ಜ್ಯೋತಿ ರಥವನ್ನು ಬುಧವಾರದಂದು ಬಾಳಗಡಿಯ ಕನ್ನಡ ಭವನದಿಂದ ಅದ್ದೂರಿಯಾಗಿ ಕೊಪ್ಪ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕೊಪ್ಪ ಪಟ್ಟಣ ಕಡೆ ಹೊರಟ ರಥವನ್ನು ಪಟ್ಟಣ ಪಂಚಾಯಿತಿ ಹತ್ತಿರ ತಾಲ್ಲೂಕು ಆಡಳಿತಾಂಗ ಪೂರ್ಣ ಕುಂಭ ಸ್ವಾಗತ ಕೋರಿದರು.

ನಂತರ ತಾಲ್ಲೂಕು ತಾಹಶೀಲ್ದಾರ್ ಮತ್ತು ಕಾರ್ಯನಿರ್ವಹಾಣಾಧಿಕಾರಿಗಳು ಮೊದಲ್ಗೊಂಡು ಅಧಿಕಾರಿಗಳು, ಜನಪ್ರತಿನಿದಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳು ರಥಕ್ಕೆ ಮಾಲಾರ್ಪಣೆ ಮಾಡಿದರು. ಬಸ್ ನಿಲ್ದಾಣದ ವರೆಗೆ ವೀರ ಗಾಸೆ ತಂಡದೊಂದಿಗೆ ನೃತ್ಯ, ಡೊಳ್ಳು ಕುಣಿತದೊಂದಿಗೆ, ಆಟೋ ರ್ಯಾಲಿ, ಶಾಲಾ ಮಕ್ಕಳ ಬೃಹತ್ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣದಲ್ಲಿ ಜಾತ ಸಮಾವೇಶ ಗೊಂಡಿತು.




Leave a reply