ಮಣ್ಣಿಗೂ ಚಿನ್ನಕ್ಕೂ ನಡುವೆ ಬಹಳ ವ್ಯತ್ಯಾಸವಿದೆ. ಆದರೆ, ಬ್ರಾಹ್ಮಣರು ಮತ್ತು ಚಂಡಾಲರ ನಡುವೆ ಅಂತಹ ಯಾವ ವ್ಯತ್ಯಾಸವೂ ಇಲ್ಲ. ಎರಡು ಕಟ್ಟಿಗೆಗಳನ್ನು ಉಜ್ಜಿದಾಗ ಅಗ್ನಿ ಹುಟ್ಟುವ ಹಾಗೆ ಬ್ರಾಹ್ಮಣ ಹುಟ್ಟುವುದಿಲ್ಲ. ಆಕಾಶದಿಂದಲೋ ಅಥವಾ ಗಾಳಿಯಿಂದಲೋ ಬ್ರಾಹ್ಮಣರು ಉದುರಲಿಲ್ಲ. ಭೂಮಿಯನ್ನು ಸೀಳಿಕೊಂಡು ಅವರು ಮೇಲೆ ಬರಲಿಲ್ಲ. ಚಂಡಾಲನು ಒಬ್ಬ ಹೆಣ್ಣಿನ ಗರ್ಭದಿಂದ ಹುಟ್ಟಿದಂತೆಯೇ ಬ್ರಾಹ್ಮಣರೂ ಹುಟ್ಟಿದರು. ಎಲ್ಲಾ ಮಾನವರು ಒಂದೇ ರೀತಿಯ ಅಂಗಗಳನ್ನು ಹೊಂದಿದ್ದಾರೆ. ಅವರ ದೇಹ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಾಗಾದರೆ ಬ್ರಾಹ್ಮಣರನ್ನು ಭಿನ್ನ ಜಾತಿ ಎಂದು ಏಕೆ ಪರಿಗಣಿಸಬೇಕು? ಮನುಷ್ಯರಲ್ಲಿ ಅಸಮಾನತೆಯನ್ನು ರೂಢಿಸುವುದು ಪ್ರಕೃತಿಗೆ ವಿರುದ್ಧವಾಗಿದೆ. ‘ಬೌದ್ಧ ದಮ್ಮ ಎಂದರೇನು?’ ಲೇಖಕ, ಪ್ರೊಫೆಸರ್ ಪೋಕಳ ಲಕ್ಷ್ಮಿ ನರಸು ಅವರು ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ಆಧುನಿಕ ಬೌದ್ಧ ಹೋರಾಟಗಾರರಾಗಿದ್ದಾರೆ.
ಯಾವುದೇ ಸಂಸ್ಕೃತಿಯಲ್ಲಿ ಹಬ್ಬಗಳು ಮತ್ತು ರಜಾದಿನಗಳನ್ನು ಆಚರಿಸಲು ಕ್ಯಾಲೆಂಡರ್ ಅತ್ಯಗತ್ಯ. ಪ್ರಪಂಚದ ಪ್ರತಿಯೊಂದು ಧರ್ಮವು ತನ್ನದೇ ಆದ ಕ್ಯಾಲೆಂಡರ್ ಅನ್ನು ರಚಿಸಿದೆ. ರೋಮನ್ನರು ತಮ್ಮ ಕಾಲದಲ್ಲಿ ರೋಮನ್ ಕ್ಯಾಲೆಂಡರ್ ಅನ್ನು ಸ್ಥಾಪಿಸಿದರು. ನಂತರದ ಕಾಲದಲ್ಲಿ, ಕ್ರಿಸ್ತನ ಜನ್ಮ ದಿನಾಂಕವನ್ನು ಅನುಸರಿಸಿ, ಅವರು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡರು. ಇಸ್ಲಾಂ ಧರ್ಮವು ಮುಹಮ್ಮದ್ ಅವರ ಕಾಲಕ್ಕೆ ಅನುಗುಣವಾಗಿ ಮಕ್ಕಮದೀನಕ್ಕೆ ಹೋಗಲು ಉತ್ತಮ ಸಮಯವನ್ನು ನಿರ್ಧರಿಸಿತು. ಅಲ್ಲದೆ, ಭಾರತದಲ್ಲಿ ಶಕ ವರ್ಷವನ್ನು ಗಮನದಲ್ಲಿಟ್ಟುಕೊಂಡು, ಸಾಮಾನ್ಯ ಶಕ 78 ರಿಂದ ಅಂದರೆ ಬೌದ್ಧ ರಾಜ ಕನಿಷ್ಕನ ಕಾಲದಿಂದ ಬೌದ್ಧ ಪಂಚಾಂಗವು ಬಳಕೆಗೆ ಬಂದಿತು. ಬುದ್ದನ ಕಾಲದಿಂದ ಇರುವ ಯುಗಾಬ್ದಿ ಕ್ಯಾಲೆಂಡರ್ ಅನ್ನು ಆಧರಿಸಿ ಎಲ್ಲಾ ಬೌದ್ಧ ದೇಶಗಳು ತಮ್ಮ ಹಬ್ಬಗಳನ್ನು, ವಿಶೇಷ ದಿನಗಳನ್ನು ಏರ್ಪಡಿಸಿಕೊಂಡವು. ಕನಿಷ್ಟನು ಭಾರತದಲ್ಲಿ ಬೌದ್ಧ ದಮ್ಮವನ್ನು ಪ್ರಚಾರ ಮಾಡಿದಾಗ ಈ ಶಕ (ಯುಗ) ವರ್ಷ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು. ಪ್ರಾಚೀನ ಶಿಲಾ ಶಾಸನಗಳಲ್ಲಿ ಈ ಕ್ಯಾಲೆಂಡರ್ ಅನ್ನು ಆಧರಿಸಿ ಅಂದಿನ ಕಾಲವನ್ನು ಉಲ್ಲೇಖಿಸುತ್ತಿದ್ದರು. ಒಂಬತ್ತನೇ ಶತಮಾನದಲ್ಲಿ ಮೊದಲ ಬಾರಿಗೆ ವಿಕ್ರಮನಾಮ ಸಂವತ್ಸರಕ್ಕೆ ಸಂಬಂಧಿಸಿದ ವಿಷಯಗಳು ಬೆಳಕಿಗೆ ಬಂದವು. ಇದು ಶತಮಾನದ ವರ್ಷವೂ ಆಗಿದೆ. ಆದರೆ ಅವರ ನಡುವೆ 15 ದಿನಗಳ ವ್ಯತ್ಯಾಸವಿದೆ. ಸಿಥಿಯನ್ನರು ಸಹ ಬೌದ್ಧರಾಗಿದ್ದರು. ಅವರೂ ಅದನ್ನು ಬಳಸಿಕೊಂಡರು. ಆದರೆ, ಅದನ್ನು ಮಲ್ಯರ ವರ್ಷ ಎನ್ನುತ್ತಾರೆ. ಅವರು ಈ ಮಲ್ಯ ವರ್ಷವನ್ನು ಸಾಮಾನ್ಯ ಯುಗದ ಮೊದಲು 58 ದಿಜಾಜುನಿಂದ ಪ್ರಾರಂಭಿಸಿದರು. ಈ ಮಲ್ಯ 9ನೇ ಶತಮಾನದ ನಂತರ ಇದನ್ನು ವಿಕ್ರಮನಾಮ ಸಂವತ್ಸರ ಎಂದು ಕರೆಯುತ್ತಾರೆ.
ಭಾರತೀಯರು ಇಂದು ಶಕ ವರ್ಷವನ್ನು ಬಳಸುತ್ತಾರೆ. ಹಿಂದೂ ಕ್ಯಾಲೆಂಡರ್ ಎಂದು ಕರೆಯಲ್ಪಡುವ ಇದು ಹಿಂದೂಗಳು ರಚಿಸಿಲ್ಲ, ಇದು ಬೌದ್ಧ ಕ್ಯಾಲೆಂಡರ್! ಆದ್ದರಿಂದಲೇ ಮೊದಲ ಮಾಸವನ್ನು ‘ಚೈತ್ಯ’ ಎಂದು ಕರೆಯುತ್ತಾರೆ. ಅವರು ಬುದ್ಧರ ಚೈತ್ಯ-ಸ್ತೂಪಗಳನ್ನು ಸಂಕೇತಿಸುವ ಚೈತ್ಯದಿಂದ ಪ್ರಾರಂಭಿಸಿದರು. ಅದನ್ನು ಸಂಸ್ಕೃತೀಕರಿಸಿ ವೈದಿಕ ಧರ್ಮಾಂಧರು ಚೈತ್ರ ಎಂದು ಕರೆದರು. ನಮ್ಮ ದೇಶದ ಸ್ವಾತಂತ್ರ್ಯದ ನಂತರ, ಸರ್ಕಾರವು ಬೌದ್ಧ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡಿತು. ಭಾರತ ಸರ್ಕಾರವು ಬೌದ್ಧ ಚಕ್ರ, ಅಶೋಕ ಸ್ತೂಪ ಮತ್ತು ಸಿಂಹಗಳನ್ನು ತಮ್ಮ ಶಕ್ತಿಯ ಸಂಕೇತಗಳಾಗಿ ಅಳವಡಿಸಿಕೊಂಡಿದೆ. ಆ ಪಂಚಾಂಗವನ್ನು ನೋಡುವ ಬ್ರಾಹ್ಮಣಶಾಹಿ ಪುರೋಹಿತರು ದಕ್ಷಿಣೆಯನ್ನು ತೆಗೆದುಕೊಂಡು ತಿಥಿ, ವಾರ ಮತ್ತು ನಕ್ಷತ್ರಗಳನ್ನು ಹೇಳುತ್ತಾರೆ. ಅಂದರೆ ಅವರು ಅದರೊಂದಿಗೆ ವ್ಯಾಪಾರ ಮಾಡಲು ಪ್ರಾರಂಭಿಸಿದರು! ನಾಸಾ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸೂರ್ಯ ಚಂದ್ರರ ಚಲನವಲನದ ಬಗ್ಗೆ ತಿಳಿದುಕೊಳ್ಳುತ್ತದೆ, ನಾವು ಸ್ವಲ್ಪ ದಕ್ಷಿಣೆ ತೆಗೆದುಕೊಂಡು ಅದನ್ನೇ ಇಲ್ಲಿ ಸರಿಯಾಗಿ ಹೇಳುತ್ತವೆ ಎಂದು ಪ್ರಚಾರ ಮಾಡಿದರು. ಕೆಲವು ಅಮಾಯಕರು ಮತ್ತು ಅನೇಕ ಮೂರ್ಖ ನಾಯಕರನ್ನು ಹೊಂದಿರುವ ದೇಶ ನಮ್ಮದಾಗಿರುವುದರಿಂದ, ಅವರ ವ್ಯಾಪಾರ ಇಲ್ಲಿ ಸರಾಗವಾಗಿ ನಡೆಯುತ್ತಿದೆ. ಇದು ಮನ ಋಷಿ ಪುಂಗಗಳು ರಚಿಸಿದ ಪಂಚಾಂಗ, ಅದರ ಪ್ರಕಾರವೇ ಈ ಪಂಚಾಂಗ ಬಳಕೆಗೆ ಬಂತು ಎಂದು ಮನುವಾದಿಗಳು ಪ್ರಚಾರ ಮಾಡಿದರು. ಹೀಗೆ ಬೌದ್ಧ ಪಂಚಾಂಗಕ್ಕೂ ಅನ್ಯಾಯವಾಯಿತು.
ಬ್ರಾಹ್ಮಣ್ಯದ ಪ್ರತಿಪಾದಕರು ಒಂದು ಸಣ್ಣ ಪ್ರಶ್ನೆಗೂ ಕೂಡ ಉತ್ತರಿಸಲಾರರು. ಶಕ ವರ್ಷ ಎಂಬ ಪದ ಪಂಚಾಂಗಗಳಲ್ಲಿ ಮತ್ತು ಕ್ಯಾಲೆಂಡರ್ ಗಳಲ್ಲಿ ಏಕಿದೆ? ಶಕ ಯಾರದು? ಶಾಕ್ಯಗಣಂ ಯಾರದು? ಅದು ಬುದ್ಧನದ್ದಲ್ಲವೇ? ಪ್ರಪಂಚದ ಧರ್ಮಗಳು ತಮ್ಮದೇ ಆದ ಕ್ಯಾಲೆಂಡರ್ ಹೊಂದಿದ್ದರೆ, ಬ್ರಹ್ಮನಿಗೆ ಏಕೆ ಪ್ರತ್ಯೇಕ ಕ್ಯಾಲೆಂಡರ್ ಇಲ್ಲ? ವೈದಿಕ ಧರ್ಮಗಳು ಬೌದ್ಧ ಕ್ಯಾಲೆಂಡರ್ನಿಂದ ನಿರ್ಧರಿಸಲ್ಪಟ್ಟ ಹಬ್ಬಗಳನ್ನು ಏಕೆ ಆಚರಿಸುತ್ತಿವೆ? ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ. ಬೌದ್ಧಧರ್ಮವನ್ನು ನಾಶಮಾಡುವ ತಮ್ಮ ಕಾರ್ಯಾಚರಣೆಯಲ್ಲಿ ವೈದಿಕರು ಬೌದ್ಧ ಕ್ಯಾಲೆಂಡರ್ ಅನ್ನು ಸಹ ಬಿಡಲಿಲ್ಲ. ಈಗ ದೇಶದಲ್ಲಿ ಬಳಕೆಯಲ್ಲಿರುವ ಕ್ಯಾಲೆಂಡರ್ ಬೌದ್ಧರದ್ದು – ಒಂದು ರೀತಿಯಲ್ಲಿ ಅವರು ಪಿತೂರಿಯ ಮೂಲಕ ತಮ್ಮ ಆಧಿಪತ್ಯವನ್ನು ಪ್ರದರ್ಶಿಸಿಕೊಂಡರು. ನಿಜ! ಆದರೆ, ಬೆಳಕನ್ನು ಮುಚ್ಚಿ ಸತ್ಯವನ್ನು ಮರೆಮಾಚುವುದು ಯಾರಿಂದಲೂ ಆಗಿಲ್ಲ. ಸತ್ಯವು ಹೊರಬರುತ್ತಿವೆ. ಬೆಳಕು ವಿಸ್ತರಿಸುತ್ತಿವೆ. ಎಲ್ಲೆಂದರಲ್ಲಿ ತೆರೆದುಕೊಂಡಿರುವ ಬೌದ್ಧ ಶಿಲ್ಪಗಳು ಗತಕಾಲದ ಇತಿಹಾಸವನ್ನು ಕಣ್ಮುಂದೆ ತರುತ್ತಿವೆ. ಬೆಳಕನ್ನೂ ಸಹಿಸಲಾರದವರೂ, ಸತ್ಯವನ್ನು ಅರಿಯಲಾರದವರು – ಕಾಲ್ಪನಿಕ ಪಾತ್ರಗಳಿಗೆ ಮಂದಿರ ಕಟ್ಟುವ ಮೂರ್ಖ ಶಿಖಾಮಣಿಗಳೂ ಇದ್ದಾರೆ. ಖಂಡಿತವಾಗಿ! ಕೆಟ್ಟದ್ದಿದ್ದರೆ ಮಾತ್ರ ಒಳ್ಳೆಯದರ ಮೌಲ್ಯ ತಿಳಿಯುತ್ತದೆ ಅಲ್ಲವೇ?
ಸರ್ವ ಭಾಷೆಗಳ ಜನನಿ ಸಂಸ್ಕೃತ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ. ಆದರೆ ಅದಕ್ಕೆ ತಕ್ಕ ಪುರಾವೆಗಳನ್ನು ನೀಡಲಾರರು. ಈ ದೇಶಕ್ಕೆ ವಲಸೆ ಬಂದ ಆರ್ಯರು ತಮ್ಮೊಂದಿಗೆ ತಂದ ಸಂಸ್ಕೃತವೊಂದು ಉಪಭಾಷೆ, ಅದಕ್ಕೆ ಲಿಪಿಯಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾರರು. ಅವರು ಒಪ್ಪದಿದ್ದರೂ, ಚಾರಿತ್ರಿಕ ಆಧಾರಗಳು ಹೀಗಿವೆ. ಅವರು ಆಗಮನವಾಗುವುದಕ್ಕೆ ಮುಂಚೆಯೇ ಈ ದೇಶದಲ್ಲಿ ನಾಗರಿ ಲಿಪಿ ಇತ್ತು. ಆ ಭಾಷೆ ಯಾರದು? ಈ ದೇಶದ ಮೂಲನಿವಾಸಿಗಳಾದ ನಾಗಜಾತಿ ಆದಿವಾಸಿಗಳ ಭಾಷೆಯದು. ನಾಗರಿ ಲಿಪಿಯಲ್ಲಿ ಸಂಸ್ಕೃತವನ್ನು ಕರೆದುಕೊಂಡು, ನಾಗರಿಯನ್ನು ದೇವಗಾರಿ ಎಂದು ಕರೆದರು. ತಮ್ಮ ಸಂಸ್ಕೃತವನ್ನು ದೇವರ ಭಾಷೆ ಎಂದು ಉತ್ತುಂಗಕ್ಕೇರಿಸಿದರು. ಬುದ್ಧನ ಕಾಲದಲ್ಲಿ ಜನರ ಭಾಷೆ ಪಾಲಿ. ಇದರ ಲಿಪಿ ಧಮ್ಮ ಲಿಪಿ ಅದನ್ನೇ ಬ್ರಾಹ್ಮಿ ಲಿಪಿ ಎಂದು ಕೂಡ ಕರೆದರು. ಜನರ ಭಾಷೆಯಾದ ಪಾಲಿ ಭಾಷೆಯಲ್ಲಿ ಬುದ್ಧನು ತನ್ನ ಬೋಧನೆಗಳನ್ನು ಮಾಡಿದನು. ಅಶೋಕನ ಶಿಲಾ ಶಾಸನಗಳು ಪಾಲಿ ಮತ್ತು ಪ್ರಾಕೃತ ಭಾಷೆಗಳಲ್ಲಿವೆ. ಪ್ರಾಕೃತ – ಎಂದರೆ ಪ್ರಕೃತಿ ದತ್ತವಾಗಿ ಏರ್ಪಟ್ಟಿರುವುದು ಎಂದರ್ಥ. ಸಂಸ್ಕೃತ ಎಂದರೆ ಸಂಸ್ಕರಿಸಲ್ಪಟ್ಟದ್ದು, ಸಂಸ್ಕರಿಸಲ್ಪಟ್ಟದ್ದು ಮೂಲ ಭಾಷೆಯಾಗಲಾರದು ಅಲ್ಲವೇ? ಪಾಲಿ ಮತ್ತು ಪ್ರಾಕೃತ ವಿಶ್ವದ ಅತ್ಯಂತ ಹಳೆಯ ಭಾಷೆಗಳಾಗಿವೆ, ಇತ್ತೀಚೆಗೆ ವಿದೇಶಿ ಸಂಶೋಧಕರು ಫ್ರೆಂಚ್ ಭಾಷೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪಾಲಿ ಭಾಷೆಯ ಪದಗಳಿರುವುದನ್ನು ದೃಢಪಡಿಸಿದರು. ಪ್ರಾಚೀನ ಭಾಷೆಗಳು ನಂತರದ ಕಾಲದಲ್ಲಿ ರೂಪುಗೊಂಡ ಭಾಷೆಗಳ ಮೇಲೆ ಪ್ರಭಾವ ಬೀರಿರಬೇಕು. ಹೀಗಿರುವಾಗ ಲಿಪಿ ಇಲ್ಲದ ಮಾಂಡಲಿಕ ಸಂಸ್ಕೃತವು ಸರ್ವ ಭಾಷೆಗಳ ಜನನಿ ಆಗುವುದಾದರೂ ಹೇಗೆ?
ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. ನಾಗಜಾತಿಗಳವರೆಲ್ಲರೂ ಬೌದ್ಧರು. ಅವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಲ್ಲಾ ಪ್ರದೇಶಗಳು ನಾಗ ಹೆಸರಿನೊಂದಿಗೆ ಪ್ರಾರಂಭವಾಗುತ್ತವೆ. ಕಾಶ್ಮೀರದ ಅನಂತನಾಗ್ ಮತ್ತು ಮಹಾರಾಷ್ಟ್ರದ ನಾಗ್ಪುರದಂತೆ. ಬೌದ್ಧ ಧರ್ಮ ಮತ್ತು ನಾಗ ಕುಲದ ನಡುವಿನ ಅವಿನಾಭಾವ ಸಂಬಂಧದಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ನಾಗಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಈಗ ಧಮ್ಮ ಲಿಪಿಯನ್ನು ನೋಡೋಣ. ಧಮ್ಮ ಎಂಬುದು ಪಾಲಿ ಭಾಷೆಯ ಪದ. ಏನನ್ನು ಧರಿಸುವುದು ಎಂದರ್ಥ ಅಥವಾ ವಹಿಸುವುದು ಎಂದರೆ – ಮನಸ್ಸು ಯಾವ ಮಾತುಗಳನ್ನು ಧರಿಸಿ ಅಥವಾ ವಹಿಸಿ – ಮನಸ್ಸನ್ನು ಆವರಿಸಿ ದುಃಖಿಸುವುದಿಲ್ಲವೋ – ಯಾವ ಮಾತುಗಳನ್ನು ಕೇಳುವುದರಿಂದ ಮನಸ್ಸು ಅಶುದ್ಧತೆಯಿಂದ ಮುಕ್ತವಾಗುತ್ತದೆಯೋ ಅದೇ ಧಮ್ಮಪದ! ಧಮ್ಮಪದವು ತ್ರಿಪಿಟಕದಲ್ಲಿ ಬೌದ್ಧಿಕನಿಕಾಯದಲ್ಲಿ ಒಂದು ಭಾಗವಾಗಿದೆ. ಇವು ಪ್ರತ್ಯಕ್ಷವಾಗಿ ಬುದ್ಧ ಹೇಳಿದ ಕಥೆಗಳಲ್ಲ. ಬುದ್ಧನ ಬೋಧನೆಗಳ ಸಾರ! ಬುದ್ಧನ ಸಂದೇಶಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಲು ಯಮೇಲು ಮತ್ತು ತೇಲಕು ಎಂಬ ಇಬ್ಬರು ಸನ್ಯಾಸಿಗಳು ಅವಕಾಶ ನೀಡುವಂತೆ ಬುದ್ಧನನ್ನು ಕೇಳಿಕೊಂಡರು. ಅದಕ್ಕೆ ಬುದ್ಧ ಒಪ್ಪಲಿಲ್ಲ. ‘ಬೇಡ’ ಎಂದು ಎಚ್ಚರಿಸಿದರು. “ನನ್ನ ಸಂದೇಶಗಳನ್ನು ಸಂಸ್ಕೃತಕ್ಕೆ ಎಂದಿಗೂ ಮಾರ್ಪಡಿಸಬೇಡಿ” – ಎಂದು ಸ್ಪಷ್ಟಪಡಿಸಿದರು. ಏಕೆಂದರೆ ತಾನು ಹೇಳಿದನ್ನು ಅಪಾರ್ಥಗೊಳಿಸಿ, ವಿಕೃತವಾಗೊಳಿಸಿ, ಧಮ್ಮವನ್ನು ಅಪಖ್ಯಾತಿಯಾಗುತ್ತಾರೆಂದು ಅವರೇ ಅಂದೇ ಗ್ರಹಿಸಿದ್ದರು.
ಬುದ್ಧನು 14 ರೀತಿಯ ಜ್ಞಾನವನ್ನು ನೀಡಿದನೆಂದು – ಭದಂತುಜ್ಞಾನ ಜ್ಯೋತಿ ಹೇಳಿದರು. ಅವರು ಬುದ್ಧನನ್ನು ‘ಜ್ಞಾನದ ಕುಶಲಕರ್ಮಿ’ ಎಂದೂ ಬಣ್ಣಿಸಿದರು. ಅದು ತಥಾಗತ ಸಮ್ಯಕ್ ಸಂಬುದ್ಧನಿಗೆ ಮಾತ್ರ ಸಾಧ್ಯ – ಎಂದಿದ್ದರು. ಇನ್ನೊಂದು ಅಂಶವನ್ನೂ ನೋಡಿ. ವೈದಿಕ ಧರ್ಮದವರು ಸ್ವಂತ ಮಾಡಿಕೊಂಡ ಕೇಸರಿ ಬಣ್ಣವನ್ನು ಯಾರದು? ಅದು ಬುದ್ಧನದು! ಬುದ್ಧನ ಜೀವನದ ಪ್ರತೀಕ! ಇದು ಪ್ರೀತಿ, ಸಹಾನುಭೂತಿ ಮತ್ತು ಕ್ಷಮೆಯನ್ನು ಸಂಕೇತಿಸುತ್ತದೆ! ಈ ಕೇಸರಿ ಬಣ್ಣ ಛತ್ರಪತಿ ಶಿವಾಜಿಯ ಶೌರ್ಯ ಮತ್ತು ಪರಮ ತಾಳ್ಮೆಯನ್ನು ಸಂಕೇತಿಸುತ್ತದೆ! ಈ ಕೇಸರಿ ಬಣ್ಣವೇ ಹುತಾತ್ಮ ‘ಶಹೀದೇ ಆಜಂ’-ಭಗತ್ ಸಿಂಗ್ ಅವರ ತ್ಯಾಗದ ಸಂಕೇತವಾಗಿದೆ! ಬುದ್ಧನ ನಂತರ ಕೇಸರಿಯನ್ನು ಬಳಸಿದ ಶಿವಾಜಿ ಮತ್ತು ಭಗತ್ ಸಿಂಗ್ ರು ದೇಶದ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದರೇ ವಿನಃ ದುರ್ಬಲಗೊಳಿಸಿಲ್ಲ. ಅವರು ಯಾವುದೇ ಧಾರ್ಮಿಕ ಪರಿಕಲ್ಪನೆಗಳನ್ನು ಪ್ರಚಾರ ಮಾಡಲಿಲ್ಲ. ಕೇಸರಿ ಬಣ್ಣದ ಸ್ಥಾಯಿಯನ್ನು ಕುಗ್ಗಿಸಿಲ್ಲ. ಪ್ರಸ್ತುತ ಆ ಬಣ್ಣವನ್ನು ದೌರ್ಜನ್ಯ, ಶೋಷಣೆ, ನಿರಂಕುಶ ಪ್ರಭುತ್ವ, ಅಸಹನೆಗೆ ಯಾರು ಬಳಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಜೈ ಶ್ರೀರಾಮ್ ಎಂಬ ಘೋಷಣೆಯೊಂದಿಗೆ ಜನರ ಮಾನ, ಪ್ರಾಣವನ್ನು ಹಿಂಸಿಸುತ್ತಾ, ಜನರ ಮನೆಗಳ ಮೇಲೆ ಬುಲ್ಡೋಜರ್ಗಳನ್ನು ಕಳುಹಿಸಿ, ತಮ್ಮದು ಡಬಲ್ ಇಂಜಿನ್ ಸರ್ಕಾರ್ ಎಂದು ಡೊಳ್ಳು ಬಾರಿಸುತ್ತಿರುವವರು ಯಾರು ಎಂಬುದು ಈಗ ಎಲ್ಲರಿಗೂ ಗೊತ್ತಿದೆ. ಈ ಕೇಸರಿ ಬಣ್ಣವನ್ನು ನೆಪ ಮಾಡಿಕೊಂಡು ಅವರು ಗುಜರಾತ್-ಮಣಿಪುರಗಳಲ್ಲಿ ಹತ್ಯಾಕಾಂಡಗಳನ್ನು ನಡೆಸಿದರು? ಜಗತ್ತಿನ ದೇಶಗಳಲ್ಲಿ ದೇಶದ ಮಾನ, ಮರ್ಯಾದೆಯನ್ನು ತೆಗೆದರು? ಕೆಡವಿದರು ಸುಟ್ಟರು? ಆದ್ದರಿಂದಲೇ ಮಹಾಕವಿ ಶ್ರೀ ಶ್ರೀಗಳು “ಕುಷ್ಠರೋಗಿಯನ್ನು ಮುಟ್ಟು – ಆದರೆ ಧಾರ್ಮಿಕ ಹುಚ್ಚನ ತಂಟೆಗೆ ಹೋಗಬೇಡ” ಏಕೆಂದರೆ ಅವರು ಕಣ್ಣಿಗೆ ಕಾಣುವ ಮನುಷ್ಯರಿಗಿಂತ ಕಾಣದಿರುವ ಧರ್ಮಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ ಎಂದಿದ್ದರು.
ತಾರಾದೇವಿಯ (ಸ್ತ್ರೀ ಬೋಧಿಸತ್ವ) ಮೂರ್ತಿಗಳನ್ನು ದುರ್ಗಾ, ಕಾಳಿ, ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯಂತಹ ವಿಗ್ರಹಗಳಾಗಿ ಪರಿವರ್ತಿಸಿ ತಮ್ಮ ಜೀವನೋಪಾಯವನ್ನು ಮಾಡಿಕೊಂಡ ಪುರೋಹಿತರು ತಮ್ಮ ಚಾರಿತ್ರಿಕ ತಪ್ಪನ್ನು ಅರಿತುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ದೇವರ ವಿಗ್ರಹಗಳ ಮೇಲೆ ಮತ್ತು ಸುತ್ತಲೂ ಬುದ್ಧನ ಕೃತಿಗಳು ಏಕೆ ಇವೆ? ಸತ್ಯವನ್ನು ಹುಡುಕುವವರಿಗೆ ವಿಷಯ ಅರ್ಥವಾಗುತ್ತದೆ. ಕಣ್ಣೆದುರೇ ಇದ್ದರೂ ನೋಡದೇ, ಅರ್ಥಮಾಡಿಕೊಳ್ಳದೇ, ಮೆದುಳನ್ನು ಮುಚ್ಚಿಟ್ಟುಕೊಂಡು ಭಾವನೆಗಳನ್ನು ಕೆರಳಿಸುವಂತವರಿಗೆ ಏನು ಹೇಳಲು ಸಾಧ್ಯ? ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬ ಮಾತುಗಳನ್ನು ಕೇಳಿದಾಗ ಇವು ಹಿಂದೂ ಧರ್ಮಕ್ಕೆ ಸಂಬಂಧಿಸಿವೆ ಅನ್ನಿಸುತ್ತದೆ. ಆದರೆ, ಈ ಮಾತುಗಳನ್ನು ಮೊದಲು ಹೇಳಿದ್ದು ಗೌತಮ ಬುದ್ಧ. ಅವರು ಪಾಲಿ ಭಾಷೆಯಲ್ಲಿ ಹೇಳಿದ್ದನ್ನು ಸಂಸ್ಕೃತಕ್ಕೆ ಅನುವಾದಿಸಿ, ಬ್ರಾಹ್ಮಣಾರ್ಯರು ಅದನ್ನು ಪ್ರಚಾರ ಮಾಡಿದರು. ಅವರು ಯಾವುದೇ ಸಣ್ಣ ವಿಷಯವನ್ನು ಸಹ ಬದಲಾಯಿಸದೆ ಬಿಡಲಿಲ್ಲ. ಆದರೆ, ಬ್ರಾಹ್ಮಣ್ಯದ ಜಪ ಮಾಡುತ್ತಾ ತಿರುಗಾಡುವ ಬಹುಜನ-ಹುಚ್ಚುಜನರಿಗೆ ವಾಸ್ತವವನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಕಣ್ಣು ತೆರೆದು ನೋಡಿದರೆ ಪರಕೀಯತೆಯನ್ನು ನಿಲ್ಲಿಸಿದರೆ ಸತ್ಯಾಂಶಗಳು ಕಾಣುತ್ತವೆ. ಪ್ರಸ್ತುತ ನಾವು ಎಷ್ಟು ಹೀನಾಯ ಸ್ಥಿತಿಯಲ್ಲಿದ್ದೆವೆಂದರೆ ನಾಟಕ, ಡ್ರಾಮಗಳು ನೋಡಿ ಬೆಳ್ಳಂಬೆಳಗ್ಗೆ ಅಳುತ್ತಿದ್ದೆವೆ. ನಾವು ವಾಸ್ತವಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಿಲ್ಲ- ನಾವು ಈ ಪರಿಸ್ಥಿತಿಯಿಂದ ಹೊರಬರಬೇಕು!
- ಖ್ಯಾತ ಲೇಖಕರು, ನಿವೃತ್ತ ಜೀವಶಾಸ್ತ್ರ ಪ್ರಾಧ್ಯಾಪಕರು (ಮೆಲ್ಬೋರ್ನ್ನಿಂದ)
– ಡಾ.ದೇವರಾಜ ಮಹಾರಾಜರು
ಅನುವಾದ : ರೇಣುಕಾ ಭಾರತಿ
Leave a reply