ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳು ಮತ್ತು ಮಹಿಳೆಯರ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐಟಿ ಅಧಿಕಾರಿಗಳು ದೂರುದಾರ ತೋರಿಸಿದ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ.
ಅಸ್ಥಿಪಂಜರ ಪತ್ತೆಗೆ GPR ತಂತ್ರಜ್ಞಾನವನ್ನು ಬಳಸಲು ಎಸ್ ಐ ಟಿ ಸಿದ್ದತೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ತಜ್ಞರ ಜೊತೆ ಎಸ್ ಐ ಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸಭೆ ನಡೆಸಿದ್ದು, ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ತಜ್ಞರಿಂದ ಸಲಹೆ ಪಡೆದಿದ್ದಾರೆ. ಭೂಮಿ ಅಗೆಯುವ ಬದಲು ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ಎಸ್ ಐ ಟಿ ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ದೂರುದಾರನ ಪರವಾಗಿ 6 ಜನರು ಇದೀಗ ಎಸ್ಐಟಿ ಮುಂದೆ ಹಾಜರಾಗಿದ್ದಾರೆ. ಸ್ಥಳೀಯ 6 ಜನರು ಬಾಲಕಿಯರ ಶವ ಹೂತಿರುವುದನ್ನು ನೋಡಿರುವುದಾಗಿ ಸಾಕ್ಷಿ ಹೇಳಲು SIT ಮುಂದೆ ಬಂದಿದ್ದಾರೆ. ಶೋಧ ಕಾರ್ಯಕ್ಕೆ ಸಹಾಯ ಮಾಡುತ್ತೇವೆ ಎಂದು ಆಗಮಿಸಿದ್ದಾರೆ.
ಆದರೆ ಈ ಕುರಿತು ಎಸ್ಐಟಿ ಅಧಿಕಾರಿಗಳು ಇನ್ನೂ ಕೂಡ ಆ ಆರು ಜನರ ಹೇಳಿಕೆಗಳ ಸತ್ಯಾಸತ್ಯ ಬಗ್ಗೆ ಚರ್ಚೆ ನಡೆಸುತ್ತಿದ್ದು ಅಧಿಕಾರಿಗಳು ಇದನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎನ್ನಲಾಗಿದೆ.


Leave a reply