ಯುದ್ಧಗಳಿಂದ ಮನುಷ್ಯ ಕುಲ ವಿನಾಶವಾಗುತ್ತದೆ ಎಂಬಂತೆ. ಎರಡನೇ ಮಹಾಯುದ್ಧ ಕೇವಲ ಸೈನಿಕರ ನಡುವಿನ ಯುದ್ಧವಾಗಿರಲಿಲ್ಲ. ಅದು ಜಗತ್ತನ್ನೇ ಅಗ್ನಿಕುಂಡವಾಗಿ ಮಾರ್ಪಡಿಸಿದ ಭೀಕರ ಮಾನವ ದುರಂತವಾಗಿತ್ತು. ಸೆಪ್ಟೆಂಬರ್ 1, 1939 ರಂದು ನಾಜಿ ಜರ್ಮನಿಯ ಪೋಲೆಂಡ್ ಆಕ್ರಮಣದೊಂದಿಗೆ ಪ್ರಾರಂಭವಾದ ಈ ಕಾಳ್ಗಿಚ್ಚು, ಸೆಪ್ಟೆಂಬರ್ 2, 1945 ರವರೆಗೆ ಆರು ವರ್ಷಗಳ ಕಾಲ ಸುಧೀರ್ಘ ರಕ್ತಪಾತದೊಂದಿಗೆ ನಡೆಯಿತು. ಈ ಮಹಾ ಯುದ್ಧದಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡು, ಲಕ್ಷಾಂತರ ಮುಗ್ಧ ಜನರ ಜೀವಗಳನ್ನು ಬಲಿ ತೆಗೆದುಕೊಂಡಿತು. ಈ ಯುದ್ಧದ ಭಯಾನಕ ಅಂತ್ಯವೆಂದರೆ ಜಪಾನ್ ಮೇಲೆ ಅಮೆರಿಕದ ಪರಮಾಣು ದಾಳಿಯಾಗಿತ್ತು. ಇದು ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ, ಅಳಿಸಲಾಗದ ಗಾಯವಾಗಿ ಉಳಿದಿದೆ.
ಈ ಯುದ್ಧದಲ್ಲಿ ಅಮೇರಿಕಾ ತನ್ನ ಪ್ರಮೇಯವನ್ನು ಹೆಚ್ಚಿಸಿಕೊಳ್ಳಲು ವ್ಯೂಹಾತ್ಮಕವಾಗಿ ಕುತಂತ್ರವನ್ನು ರೂಪಿಸಿತು. ಏಷ್ಯಾದಲ್ಲಿ ಜಪಾನ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದುದು ಅಮೆರಿಕವನ್ನು ಚಿಂತೆಗೀಡು ಮಾಡಿತು. ಜಪಾನ್ ತನಗಿಂತ ಹೆಚ್ಚು ಶಕ್ತಿಶಾಲಿ ದೇಶವಾಗುತ್ತಿದೆ ಎಂಬ ಭಯ ಅಮೆರಿಕವನ್ನು ಕಾಡುತ್ತಿತ್ತು. ಆಗಿನ ಅಧ್ಯಕ್ಷ ರೂಸ್ವೆಲ್ಟ್ ತಾನು ಯುದ್ಧವನ್ನು ಪ್ರಾರಂಭಿಸುವುದಿಲ್ಲ ಎಂದು ಬಹಿರಂಗವಾಗಿ ಭರವಸೆ ನೀಡಿ, ಜಪಾನ್ ಅನ್ನು ಪ್ರಚೋದಿಸಿ, ಅದು ಅಮೆರಿಕದ ಮೇಲೆ ದಾಳಿ ಮಾಡುವಂತೆ ಮಾಡಿ, ಆ ನಂತರ ಯುದ್ಧಕ್ಕೆ ಪ್ರವೇಶಿಸುವ ದುರುದ್ದೇಶವನ್ನು ಹೊಂದಿದ್ದರು. ಈ ದುರುದ್ದೇಶದಿಂದಾಗಿ, ಜಪಾನನ್ನು ವ್ಯೂಹಾತ್ಮಕವಾಗಿ ಪ್ರತಿರೋಧಿಸಲು ಜಪಾನ್ ತೈಲದ ಅಗತ್ಯಗಳಿಗಾಗಿ ಹೆಚ್ಚಾಗಿ ಅಮೆರಿಕವನ್ನು ಅವಲಂಬಿಸುತ್ತಿದ್ದುದನ್ನು ಒಂದು ಅಸ್ತ್ರವಾಗಿ ಬಳಸಿಕೊಂಡರು. ಜಪಾನ್ ತನ್ನ ತೈಲ ಅಗತ್ಯಗಳಿಗಾಗಿ ಅಮೆರಿಕದ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿದ್ದರಿಂದ ರೂಸ್ವೆಲ್ಟ್ಗೆ ಅನುಕೂಲವಾಯಿತು. ಜಪಾನ್ ಮೇಲೆ ತೈಲ ನಿರ್ಬಂಧ ಹೇರಲು ಅವರು ಈ ಅವಕಾಶವನ್ನು ಬಳಸಿಕೊಂಡರು.
ಈ ಕ್ರಮವನ್ನು ಯುದ್ಧ ಘೋಷಣೆ ಎಂದು ಪರಿಗಣಿಸಿ ಜಪಾನ್ ಸರ್ಕಾರ ಆಕ್ರೋಶಗೊಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಜಪಾನ್ ನೌಕಾಪಡೆಯು ಡಿಸೆಂಬರ್ 7, 1941 ರಂದು ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ಹಠಾತ್ ದಾಳಿ ನಡೆಸಿತು. ಈ ದಾಳಿಯು ಅಮೆರಿಕವನ್ನು ನೇರವಾಗಿ ಎರಡನೇ ಮಹಾಯುದ್ಧಕ್ಕೆ ಕರೆತಂದಿತು. ಯುದ್ಧವು ಅಂತಿಮ ಹಂತವನ್ನು ತಲುಪುತ್ತಿದ್ದಂತೆ, ಅಮೆರಿಕವು ಜಗತ್ತನ್ನು ಬೆಚ್ಚಿಬೀಳಿಸುವ ಭಯಾನಕ ಅಸ್ತ್ರವನ್ನು ಬಳಸಿತು: ಅದು ಆಟೋಮೆಟಿಕ್ (ಸ್ವಯಂಚಾಲಿತ) ಬಾಂಬ್ ಅನ್ನು ಪ್ರಯೋಗಿಸಿತು. ಈ ಪರಮಾಣು ದಾಳಿಯು ಮಿಲಿಟರಿ ನೆಲೆಗಳನ್ನು ನಾಶಮಾಡುವ ಉದ್ದೇಶವನ್ನು ಮಾತ್ರವಲ್ಲದೆ, ಅದರ ಶಕ್ತಿ ಮತ್ತು ಪರಿಣಾಮಗಳನ್ನು ಪರೀಕ್ಷಿಸುವ ಉದ್ದೇಶವನ್ನೂ ಹೊಂದಿತ್ತು. ಈ ಪರಮಾಣು ಬಾಂಬ್ಗಳನ್ನು ತಯಾರಿಸುವ ಮೂಲ ತತ್ವಗಳನ್ನು ವಿಶ್ವಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ರೂಪಿಸಿದರು, ಅವುಗಳನ್ನು ಒಟ್ಟೊ ಹಾನ್ ಎಂಬ ವಿಜ್ಞಾನಿ ಕಂಡುಹಿಡಿದರು. ಪರಮಾಣು ಶಸ್ತ್ರಾಸ್ತ್ರಗಳ ಮೊದಲ ಪರೀಕ್ಷೆ ಜುಲೈ 16, 1945 ರಂದು ಅಲಮೊಗೊರ್ಡೊ ಬಾಂಬಿಂಗ್ ರೇಂಜ್ ನಲ್ಲಿ ‘ಟ್ರಿನಿಟಿ’ ಎಂಬ ಹೆಸರಿನಲ್ಲಿ ನಡೆಯಿತು.
ಜಪಾನ್ ಮೇಲೆ ನಡೆದ ಪರಮಾಣು ಬಾಂಬ್ ದಾಳಿಗಳು ವ್ಯಾಪಕವಾದ ಭಯಾನಕ ವಿನಾಶವನ್ನು ಸೃಷ್ಟಿಸಿತು. ಆಗಸ್ಟ್ 6, 1945 ರಂದು ಬೆಳಿಗ್ಗೆ 8:15 ಕ್ಕೆ ‘ಲಿಟಲ್ ಬರು’ ಎಂಬ ಹೆಸರಿನಲ್ಲಿ ಮೊದಲ ಪರಮಾಣು ಬಾಂಬ್ ಅನ್ನು ಹಿರೋಷಿಮಾ ನಗರದ ಮೇಲೆ ಹಾಕಲಾಯಿತು. ಇದು ಯುರೇನಿಯಂನಿಂದ ತಯಾರಿಸಲ್ಪಟ್ಟ ಕೇಂದ್ರಿಕೃತ ಪರಮಾಣು ವಿದಳನ ಬಾಂಬ್ ಆಗಿತ್ತು. ಇದರಲ್ಲಿ 64 ಕೆಜಿ ಯುರೇನಿಯಂ ಅನ್ನು ಬಳಸಲಾಗಿತ್ತು. ಇದು 64 ಕಿಲೋಟನ್ಗಳಷ್ಟು ಸಾಮಾನ್ಯ ಟಿಎನ್ಟಿಯಿಂದ ಬಿಡುಗಡೆಯಾಗುವ ಶಕ್ತಿಗೆ ಸಮಾನವಾದ ಸ್ಫೋಟವನ್ನು ಸೃಷ್ಟಿಸಿತು. ಆಗಸ್ಟ್ 9 ರಂದು ಬೆಳಿಗ್ಗೆ 11:02 ಕ್ಕೆ, “ಫ್ಯಾಟ್ ಮ್ಯಾನ್” ಎಂದು ಹೆಸರಿಸಲಾದ ಎರಡನೇ ಬಾಂಬ್ ಅನ್ನು ನಾಗಸಾಕಿ ನಗರದ ಮೇಲೆ ಹಾಕಲಾಯಿತು. ಅದು ಪ್ಲುಟೋನಿಯಂನಿಂದ ತಯಾರಿಸಲ್ಪಟ್ಟ ಇಂಪ್ಲೋಷನ್ ಫಿಶನ್ ಬಾಂಬ್ ಆಗಿತ್ತು. ಈ ಬಾಂಬ್ಗಳು ದೊಡ್ಡ ಸ್ಫೋಟವನ್ನು ಉಂಟುಮಾಡುವುದಲ್ಲದೆ, ಅಗಾಧವಾದ ಶಾಖ ಮತ್ತು ಮಾರಕ ಅಯಾನೀಕರಿಸುವ ವಿಕಿರಣವನ್ನು (ರೇಡಿಯೇಷನ್) ಸಹ ಉತ್ಪಾದಿಸಿದವು. ಈ ವಿಕಿರಣದ ಪರಿಣಾಮಗಳು ತಲೆಮಾರುಗಳಿಂದ ಜಪಾನಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿಕಿರಣಶೀಲ ಶಿಲಾಖಂಡರಾಶಿಗಳು ಮೋಡಗಳಂತೆ ಮೇಲೇರಿ, ಅಣಬೆಯಾಕಾರದ ಮೋಡವನ್ನು ಸೃಷ್ಟಿಸಿ, ನಂತರ ಭೂಮಿಗೆ ಅಪ್ಪಳಿಸಿದವು. ಈ ಎರಡು ನಗರಗಳಲ್ಲಿ ಸಾವಿರಾರು ಮುಗ್ಧ ಜನರು ಕ್ಷಣಾರ್ಧದಲ್ಲಿ ಸಾವನ್ನಪ್ಪಿದರು. ಈ ಭಯಾನಕ ಘಟನೆಗಳನ್ನು ನೆನಪು ಮಾಡಿಕೊಳ್ಳಲು, ಜಗತ್ತು ಆಗಸ್ಟ್ 6 ರಂದು ಹಿರೋಷಿಮಾ ದಿನವೆಂದು ಮತ್ತು ಆಗಸ್ಟ್ 9 ರಂದು ನಾಗಾಸಾಕಿ ದಿನವೆಂದು ಎಂದು ಆಚರಿಸಲಾಗುತ್ತದೆ.
ಅಮೆರಿಕ ಈ ದಾಳಿಗಳಿಗೆ ನಗರಗಳನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಹಲವು ದುಷ್ಟ ತಂತ್ರಗಳಿವೆ. ಹಿರೋಷಿಮಾವನ್ನು ಆಯ್ಕೆ ಮಾಡಲು ಕಾರಣವೆಂದರೆ ಆ ಸ್ಥಳದಲ್ಲಿ ಯಾವುದೇ ಅಮೇರಿಕನ್ ಮಿತ್ರಪಕ್ಷಗಳ ಯುದ್ಧ ಶಿಬಿರಗಳು ಇರಲಿಲ್ಲ. ಜಪಾನಿನ ಮಿಲಿಟರಿ ಪಡೆಗಳು ಮತ್ತು ಕಾರ್ಖಾನೆಗಳು ಅಲ್ಲಿ ಕೇಂದ್ರೀಕೃತವಾಗಿದ್ದವು. ನಗರದಲ್ಲಿ ದಟ್ಟವಾದ ಜನಸಂಖ್ಯೆ ಇರುವುದರಿಂದ ಬಾಂಬ್ನ ಪರಿಣಾಮವನ್ನು ಅಂದಾಜು ಮಾಡಲು ಸಾಧ್ಯವಾಗಿಸಿತು. ಹಿಂದಿನ ವಾಯುದಾಳಿಗಳಿಂದ ನಾಗಸಾಕಿ ನಗರವು ತೀವ್ರವಾಗಿ ಹಾನಿಗೊಳಗಾಗದ ಕಾರಣ ಅದನ್ನು ಆಯ್ಕೆ ಮಾಡಲಾಯಿತು. ಅಲ್ಲಿ ಎರಡು ದೊಡ್ಡ ಯುದ್ಧನೌಕೆಗಳನ್ನು ನಿರ್ಮಿಸಿದ ಮಿತ್ಸುಬಿಷಿ ಷಿಪಿಯಾರ್ಡ್ (ಹಡಗುಕಟ್ಟೆ) ಗೆ ಇದು ನೆಲೆಯಾಗಿತ್ತು. ಈ ದಾಳಿಗಳ ನಂತರ 1946 ರಲ್ಲಿ ಅಮೆರಿಕ ಸರ್ಕಾರ ಬಿಡುಗಡೆ ಮಾಡಿದ ವರದಿಗಳು ಹಿರೋಷಿಮಾದಲ್ಲಿ 135,000 ಜನರು ಮತ್ತು ನಾಗಸಾಕಿಯಲ್ಲಿ 64,000 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿವೆ.
ಈ ಸಾವುಗಳಿಗೆ ಕಾರಣಗಳು ಸುಟ್ಟಗಾಯಗಳು, ಅವಷೇಶಗಳಡಿ ಸಿಲುಕಿರುವುದು ಮತ್ತು ವಿಕಿರಣ ಪರಿಣಾಮಗಳಾಗಿವೆ. ವರದಿಯ ಪ್ರಕಾರ, ಹಿರೋಷಿಮಾದಲ್ಲಿ ಶೇಕಡ 60% ಸಾವುಗಳು ಸುಟ್ಟಗಾಯಗಳಿಂದ ಸಂಭವಿಸಿವೆ ಮತ್ತು ನಾಗಸಾಕಿಯಲ್ಲಿ ಶೇಕಡ 80% ಸಾವುಗಳು ಸುಟ್ಟಗಾಯಗಳಿಂದ ಸಂಭವಿಸಿವೆ. ಪರಮಾಣು ಬಾಂಬ್ನ ಪರಿಣಾಮಗಳನ್ನು ಅಧ್ಯಯನ ಮಾಡಲು ಹಿರೋಷಿಮಾಗೆ ಹೋದ ಭೌತಶಾಸ್ತ್ರಜ್ಞ ಫಿಲಿಪ್ ಮಾರಿಸನ್, ನಗರದ 33 ಅಗ್ನಿಶಾಮಕ ಠಾಣೆಗಳಲ್ಲಿ 26 ನಾಶವಾದವು ಮತ್ತು 2,400 ದಾದಿಯರಲ್ಲಿ 1,800 ಜನ ದಾದಿಯರು ಸಾವನ್ನಪ್ಪಿದರು ಎಂದು ವರದಿ ಮಾಡಿದರು. ಈ ಭಯಾನಕ ದೃಶ್ಯಗಳನ್ನು ಕಂಡ ಮಾರಿಸನ್, ಮೂರನೇ ಬಾಂಬ್ ವಿರುದ್ಧ ಪ್ರಚಾರ ಮಾಡುವುದರಲ್ಲಿ ತನ್ನ ಸಮಯವನ್ನು ಕಳೆದರು.
ಈ ವಿನಾಶವು ಪ್ರಪಂಚದಾದ್ಯಂತದ ವಿಜ್ಞಾನಿಗಳ ಮನಸ್ಸನ್ನು ಬೆಚ್ಚಿಬೀಳಿಸಿತು. ಪರಮಾಣು ಬಾಂಬ್ ತಯಾರಿಸಲು ಮೂಲ ತತ್ವಗಳನ್ನು ಒದಗಿಸಿದ ಆಲ್ಬರ್ಟ್ ಐನ್ಸ್ಟೈನ್, ಜಪಾನಿನ ನೊಬೆಲ್ ಪ್ರಶಸ್ತಿ ವಿಜೇತ ಹಿಡೆಕಿ ಯುಕಾವಾ ಅವರನ್ನು ತಮ್ಮ ಪ್ರಯೋಗಾಲಯದಲ್ಲಿ ಭೇಟಿಯಾದಾಗ ಪಶ್ಚಾತ್ತಾಪದ ಕಣ್ಣೀರಿನೊಂದಿಗೆ ಕ್ಷಮೆಯಾಚಿಸಿದರು. “ನಾನು ಮುಗ್ಧ ಜನರಿಗೆ ತೊಂದರೆಯುಂಟು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಅವರು ಬೇಡಿಕೊಂಡರು. ಈ ದಾಳಿಗಳ ನಂತರ, ಜಪಾನಿನ ಜನರು ಗಮನಾರ್ಹವಾಗಿ ದೃಢನಿಶ್ಚಯದಿಂದ ತಮ್ಮ ನಗರಗಳನ್ನು ಪುನರ್ನಿರ್ಮಿಸಿದರು. ಹಿರೋಷಿಮಾದಲ್ಲಿ ಸಮಗ್ರ ನಗರ ಪ್ರಣಾಳಿಕೆಯಡಿ 1950 ರಲ್ಲಿ ಪುನರ್ನಿರ್ಮಾಣ ಪ್ರಾರಂಭವಾಯಿತು. ಮಜ್ದಾ ಮೋಟಾರ್ ಕಾರ್ಪೊರೇಷನ್ನ ಮುಖ್ಯ ಕಾರ್ಖಾನೆಯ ನವೀಕರಣದೊಂದಿಗೆ ನಗರವು ಈ ಪ್ರದೇಶದ ಕೈಗಾರಿಕಾ ಕೇಂದ್ರವಾಗಿದೆ. ನಾಗಸಾಕಿಯಲ್ಲಿ ಮಿತ್ಸುಬಿಷಿ ಶಿಪ್ಯಾರ್ಡ್ ಅನ್ನು ಪುನರ್ನಿರ್ಮಿಸಲಾಗಿದೆ.
ಈ ಎರಡು ನಗರಗಳು ಇಂದು ಕೇವಲ ಕೈಗಾರಿಕಾ ಕೇಂದ್ರಗಳು ಮಾತ್ರವಲ್ಲ, ಪರಮಾಣು ನಿಶ್ಯಸ್ತ್ರೀಕರಣ ಚಳವಳಿಯ ಸಂಕೇತಗಳಾಗಿವೆ. ಹಿರೋಷಿಮಾದಲ್ಲಿರುವ ಪೀಸ್ ಮೆಮೋರಿಯಲ್ ಪಾರ್ಕ್ ಮತ್ತು ಪರಮಾಣು ಬಾಂಬ್ ಡೋಮ್ ಜಗತ್ತಿಗೆ ಶಾಂತಿಯ ಸಂದೇಶವನ್ನು ಕಳುಹಿಸುತ್ತಲೇ ಇವೆ. ಈ ಮಹಾ ವಿಪತ್ತಿನಿಂದ ಬದುಕುಳಿದ ಸಂತ್ರಸ್ತರಿಗೆ, ಹಿಬಾಕುಶಗಳಿಗೆ ಜಪಾನ್ ಸರ್ಕಾರವು ಅವರ ಜೀವನದುದ್ದಕ್ಕೂ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ. ಪರಮಾಣು ಬಾಂಬ್ ವಿಕಿರಣದ ಪರಿಣಾಮಗಳ ಕುರಿತು ಸಂಶೋಧನೆ ನಡೆಸಲು ಪರಮಾಣು ಬಾಂಬ್ ಅಪಘಾತ ಆಯೋಗವನ್ನು ಸ್ಥಾಪಿಸಲಾಗಿದೆ. ಇದರ ಜೀವಿತಾವಧಿ ಅಧ್ಯಯನದಲ್ಲಿ 1,20,000 ಕ್ಕೂ ಹೆಚ್ಚು ಹಿಬಾಕುಶಗಳನ್ನು ದಾಖಲಾಗಿವೆ. ಈ ಇತಿಹಾಸವು ನಮಗೆ ಒಂದೇ ಒಂದು ಪಾಠವನ್ನು ಕಲಿಸಿದೆ. ಇಂತಹ ವಿನಾಶಕಾರಿ ಯುದ್ಧಗಳ ಮತ್ತೆ ಸಂಭವಿಸಬಾರದು. ನಮ್ಮ ದೇಶವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳು ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಬರಬೇಕಿದೆ.


Leave a reply