ಮಾಸ್ಕೋ : ರಷ್ಯಾದ ಕಮ್ಚಟ್ಕಾದಲ್ಲಿರುವ ಕ್ರಾಶೆನ್ನಿನಿಕೋವ್ ಅಗ್ನಿಪರ್ವತ ಶನಿವಾರ ರಾತ್ರಿ ಸ್ಫೋಟಗೊಂಡಿದೆ. 600 ವರ್ಷಗಳಲ್ಲಿ ಮೊದಲ ಬಾರಿಗೆ ಈ ಅಗ್ನಿಪರ್ವತ (ಜ್ವಾಲಾಮುಖಿ) ಸ್ಫೋಟಗೊಂಡಿದೆ ಎಂದು ಕಮ್ಚಟ್ಕಾ ಜ್ವಾಲಾಮುಖಿ ಸ್ಫೋಟ ಪ್ರತಿಕ್ರಿಯೆ ತಂಡದ ಮುಖ್ಯಸ್ಥೆ ಓಲ್ಗಾ ಗಿರಿನಾ ಹೇಳಿದ್ದಾರೆ.
ಕಳೆದ ಬುಧವಾರ ಸಂಭವಿಸಿದ ಭೂಕಂಪದಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಅವರು ಹೇಳಿದರು. ಇದರಿಂದಾಗಿ ಫ್ರೆಂಚ್ ಪಾಲಿನೇಷ್ಯಾ ಮತ್ತು ಚಿಲಿಯವರೆಗೆ ಸುನಾಮಿ ಮುನ್ನೆಚ್ಚರಿಕೆಗಳನ್ನು ಜಾರಿ ಮಾಡಲಾಗಿದೆ. ಆ ನಂತರ ಕಮ್ಚಟ್ಕಾದ ಹೆಚ್ಚು ಸಕ್ರಿಯವಾಗಿರುವ ಕ್ರಾಶೆನ್ನಿನಿಕೋವ್ ಅಗ್ನಿ ಪರ್ವತ ಸ್ಫೋಟಗೊಂಡಿತ್ತು ಎಂದರು.
ಜ್ವಾಲಾಮುಖಿ ಸ್ಫೋಟದ ನಂತರ 6,000 ಮೀಟರ್ (3.7 ಮೈಲುಗಳು) ದೂರಕ್ಕೆ ಬೂದಿಯ ಹೊಗೆ ಕವಳದಂತೆ ಗಾಳಿಯಲ್ಲಿ ಅಪ್ಪಳಿಸಿದೆ ಎಂದು ರಷ್ಯಾದ ತುರ್ತು ಸೇವೆಗಳ ಸಚಿವಾಲಯ ತಿಳಿಸಿದೆ. ಬೂದಿಯು ಪೂರ್ವಕ್ಕೆ ಪೆಸಿಫಿಕ್ ಮಹಾಸಾಗರದ ಕಡೆಗೆ ಸಾಗುತ್ತಿತ್ತು ಮತ್ತು ಆ ಪ್ರದೇಶದಲ್ಲಿ ಯಾವುದೇ ಜನನಿಬಿಡ ಪ್ರದೇಶಗಳಿಲ್ಲ ಎಂದು ಅದು ಹೇಳಿದೆ. ಈ ಅಗ್ನಿ ಪರ್ವತ 1,856 ಮೀಟರ್ ಎತ್ತರದಲ್ಲಿದೆ. ಈ ಜ್ವಾಲಾಮುಖಿ 1463 ರಲ್ಲಿ (40 ವರ್ಷಗಳ ಅಂತರದಲ್ಲಿ) ಸ್ಫೋಟಿಸಿತು ಎಂದು ಹೇಳಲಾಗುತ್ತದೆ.


Leave a reply