ಪಾಪಪ್ರಜ್ಞೆಗಳು ಮತ್ತು ಪ್ರಜ್ಞಾಪಾಪಿಗಳು
ಪ್ರಜ್ಞೆ ಕಳೆದುಕೊಂಡು
ಪಾಪ ಮಾಡಿದವರು
ಅಳುಕಿನ ಚಿತೆಯಲ್ಲಿ ಬೆಂದು
ಮತ್ತೆ ಮನುಷ್ಯರಾಗಬಹುದು..
ಅನುಕ್ಷಣ ಆತ್ಮಸಾಕ್ಷಿಯನ್ನು
ಕೊಂದುಕೊಳ್ಳುವ
ಪ್ರಜ್ಞಾಪಾಪಿಗಳು
ನೂರುಹೆಣಗಳ ಮೇಲೆ
ನಡೆದಾಡುವ
ದೇವರಾಗಬಹುದು..
ನರಮೇಧ ಮಾಡಿಯೂ
ಪ್ರಧಾನಿ
ಪಟ್ಟವೇರಬಹುದು…
ವಿಶ್ವಕ್ಕೆ ಬೆಂಕಿಯನಿಕ್ಕಿ
ಶಾಂತಿ ಪ್ರಶಸ್ತಿಗೆ ಭಾಜನರಾಗಬಹುದು..
ಆದರೆ…
ಮತ್ತೆಂದೂ ಮನುಷ್ಯರಾಗಲಾರರು..
ಇತಿಹಾಸದಲ್ಲಿ ಮನುಷ್ಯರೆಂದು
ಎಂದಿಗೂ ದಾಖಲಾಗರು..
- ಶಿವಸುಂದರ್
ಜನಪರ ಚಿಂತಕರು, ಲೇಖಕರು…


Leave a reply