ಗಾಜಾ : ಗಾಜಾ ಮೇಲೆ ಇಸ್ರೇಲಿ ದಾಳಿಗಳು ಮುಂದುವರೆದಿವೆ. ಈ ದಾಳಿಗಳ ಪರಿಣಾಮವಾಗಿ ಈಗಾಗಲೇ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಆದರೂ ಇಸ್ರೇಲ್ ಪ್ಯಾಲೆಸ್ಟೈನ್ ಭೂಮಿಯನ್ನು ಆಕ್ರಮಿಸಿಕೊಳ್ಳುವ ಸಲುವಾಗಿ ಪ್ಯಾಲೆಸ್ಟೀನಿಯನ್ನರನ್ನು ಕ್ರೂರವಾಗಿ ಕೊಲ್ಲುತ್ತಲೇ ಇದೆ.
ಗುರುವಾರ ಬೆಳಗಿನ ಜಾವ ಆರಂಭವಾದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 85 ಮಂದಿ ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಮತ್ತೊಂದೆಡೆ, ಇಸ್ರೇಲ್ ದಾಳಿಗಳಿಂದ ಮಾತ್ರವಲ್ಲದೇ, ಹಸಿವಿನಿಂದ ಉಂಟಾಗುವ ಸಾವುಗಳೂ ಅಲ್ಲಿ ಹೆಚ್ಚುತ್ತಿವೆ. ಹಸಿವಿನ ಸಂಕಟವನ್ನು ತಡೆಯಲಾಗದೇ ಇತ್ತೀಚೆಗೆ 29 ಮಂದಿ ಮಕ್ಕಳು ಮತ್ತು ವೃದ್ಧರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವು ತಿಳಿಸಿದೆ. ಸಾವಿರಾರು ಪ್ಯಾಲೆಸ್ಟೀನಿಯನ್ನರು ಇನ್ನೂ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದೆ.
Leave a reply