“ಮನುಷ್ಯರನ್ನು ಕೊಂದು ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಿಂತ ಧರ್ಮವನ್ನು ಕೊಂದು ಮನುಷ್ಯರನ್ನು ರಕ್ಷಿಸಿಕೊಳ್ಳುವುದು ಉತ್ತಮ” – ಗೌತಮ ಬುದ್ಧ
ಅಲೆಕ್ಸಾಂಡರ್ ಏಷ್ಯಾದ ಶೇಕಡ ಐದರಷ್ಟು ಭೂಭಾಗವನ್ನು ಗೆದ್ದುಕೊಂಡಿದ್ದನು. ಹೆಚ್ಚು ಕಡಿಮೆ ಇಡೀ ಏಷ್ಯಾವನ್ನೇ ಗೆದ್ದುಕೊಂಡನು. ಇನ್ನು ವಿಶ್ವದ ಚಾಂಪಿಯನ್ ಯಾರು ಎಂಬುದನ್ನು ನಾವು ನಿರ್ಧರಿಸಬೇಕಲ್ಲವೇ! ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ (1879 – 1355) ಬುದ್ಧನ ಬಗ್ಗೆ ಏನು ಹೇಳಿದ್ದಾರೆಂದು ಎಲ್ಲರೂ ತಿಳಿದುಕೊಳ್ಳಬೇಕಿದೆ. “ಜಗತ್ತಿನಲ್ಲಿ ಯಾವುದೇ ಆತ್ಮವಿಶ್ವಾಸವಿರುವ ವ್ಯಕ್ತಿ ತನ್ನ ಬುದ್ಧಿಮತ್ತೆ ಮತ್ತು ತಿಳುವಳಿಕೆಯ ಮೂಲಕ ಮಾಡಲು ಅಸಾಧ್ಯವಾದದ್ದನ್ನು ಬುದ್ಧನು ಮಾಡಿದನೆಂದು ನನಗೆ ಅರ್ಥವಾಗಿದೆ. ಬೋಧಿಸತ್ವನಿಗೆ ಮಾತ್ರ ಶಾಂತಿಯನ್ನು ಸ್ಥಾಪಿಸುವ ಶಕ್ತಿ ಇದೆ. ಇತರೆ ಧರ್ಮಗಳಲ್ಲಿ, ಹೆಚ್ಚು, ಕಡಿಮೆ, ಕಪ್ಪು, ಬಿಳಿಯಂತಹ ತಾರತಮ್ಯಗಳಿವೆ. “ಬುದ್ಧನು ಯೇಸುವಿನ ಗುರುವೂ ಆಗಿದ್ದನು. ಯೇಸು ಕಾಶ್ಮೀರದಲ್ಲಿ ಹದಿಮೂರು ವರ್ಷಗಳ ಕಾಲ ವಾಸಿಸಿದನು. ಬೌದ್ಧ ಜೀವನ ವಿಧಾನವನ್ನು ಕಲಿತನು. ಯುರೋಪಿನಲ್ಲಿ ಯೇಸುವನ್ನು ‘ದೇವ ಕುಮಾರ’ ಎಂದು ಕರೆಯಲಾಗುತ್ತಿತ್ತು. ಅವರ ಮೂಲಕವೇ ಬುದ್ಧನ ಬೋಧನೆಗಳು ಯುರೋಪಿಯನ್ನರನ್ನು ತಲುಪಿದವು. ಆದರೆ ಈಗ ಯುರೋಪಿಯನ್ನರು ಅದನ್ನು ಒಪ್ಪುವುದಿಲ್ಲ ಎಂಬುದು ಬೇರೆ ವಿಷಯ! ಯಾರು ಒಪ್ಪಿಕೊಂಡರೂ ಅಥವಾ ಒಪ್ಪದಿದ್ದರೂ, ದಯೆ, ಕರುಣೆ, ಕ್ಷಮೆಯ ಬಗ್ಗೆ ಜಗತ್ತಿಗೆ ಮೊಟ್ಟಮೊದಲು ತಿಳಿಸಿದವರು ಬುದ್ಧ. ಬೌದ್ಧಧರ್ಮ ಒಂದು ಸಾಮಾಜಿಕ ತತ್ವಶಾಸ್ತ್ರ! ಎಲ್ಲಾ ವಿಜ್ಞಾನಗಳ ಮತ್ತು ಎಲ್ಲಾ ಸದ್ಗುಣಗಳ ಸಾರ.
ಇಡೀ ಸಮಾಜವನ್ನು ಮತ್ತು ಅದರ ಉಳಿವನ್ನು ಮುನ್ನಡೆಸುವ ಜವಾಬ್ದಾರಿ ಬೌದ್ಧ ಧರ್ಮದಲ್ಲಿ (ಧರ್ಮ) ಕಂಡುಬರುತ್ತದೆ. ಸಮಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಲು ಬೌದ್ಧಧರ್ಮ ಒಂದು ಹೊಸ ಮಾರ್ಗವಾಗಿದೆ! ಬೌದ್ಧಧರ್ಮವು ಒಂದು ಧರ್ಮವಲ್ಲ, ಬದಲಾಗಿ ಧಮ್ಮ (ಧರ್ಮ)ವಾಗಿರುವುದಕ್ಕೆ ಕಾರಣ ಅದಕ್ಕೆ ದೇವಾಲಯಗಳು, ದೇವರು ಇಲ್ಲದಿರುವುದು. ಇದು ನೈತಿಕ ನಡುವಳಿಕೆಯೊಂದಿಗೆ ಕೂಡಿದ ಜೀವನಶೈಲಿ ಇರುವುದು. ಯಜ್ಞ ಯಾಗಾದಿಗಳಂತಹ ಕರ್ಮಕಾಂಡಗಳು ಇಲ್ಲದಿರುವುದು. ಬುದ್ಧನ ಬೋಧನೆಗಳು ಜನರ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ, ಜನರು ಸ್ವಯಂಪ್ರೇರಣೆಯಿಂದ ಬೌದ್ಧ ಧಮ್ಮವನ್ನು ಸ್ವೀಕರಿಸಲು ಮುಂದೆ ಬರುತ್ತಿದ್ದರು. ನಾವು ಸಮಾಜದಲ್ಲಿ ಇದನ್ನು ಸ್ಪಷ್ಟವಾಗಿ ಗಮನಿಸುತ್ತಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಮಾತ್ರವಲ್ಲ, ಈಗಲೂ ಸಹ ಸಮಕಾಲಿನದಲ್ಲಿಯೂ, ಬೌದ್ಧಧರ್ಮವನ್ನು ಸ್ವೀಕರಿಸುವವರು ಸ್ವಯಂಪ್ರೇರಣೆಯಿಂದಲೇ ಸ್ವೀಕರಿಸುತ್ತಾರೆ. ಅಲ್ಲದೇ ಅವರನ್ನು ಯಾರೂ ಒತ್ತಾಯಿಸುವುದಿಲ್ಲ. ಬೌದ್ಧ ಧರ್ಮದಲ್ಲಿ, ಇತರರನ್ನು ಗೌರವದಿಂದ ಸಂಬೋಧಿಸುವ ಪದ ಭದಂತ, ಭಂತೆ, ಭಗವಂತ, ಭದಂತ… ಮುಂತಾದ ಪದಗಳೆಲ್ಲ ಸಮಾನಾರ್ಥಕ. ಗೌರವದ ಮಾತುಗಳು. ಮಹಾ ಪರಿನಿಬ್ಬಾಣದ ಸೂತ್ರದಲ್ಲಿ, ತಮಗಿಂತ ಹಿರಿಯರಾದ ಸನ್ಯಾಸಿಗಳನ್ನು “ಪೂಜ್ಯ ಸರ್” ಎಂದು ಕರೆಯಬೇಕೆಂದು ಬುದ್ಧನು ಹೇಳುತ್ತಾನೆ. ಸಮಾನಮನಸ್ಕರು ಅಥವಾ ಸ್ನೇಹಿತರಾಗಿದ್ದರೆ, ಅವರನ್ನು ‘ಔಸೋ’ ಎಂದು ಕರೆಯಬೇಕೆಂದನು. ‘ಭಗವಾನ್’ ಎಂಬುದು ಬುದ್ಧನಿಗೆ ಇರುವ ಬಿರುದು. ‘ಭಗವ’ ಎಂದರೆ ಪರಿಪೂರ್ಣನು! ಈ ಪದವನ್ನು ಕದ್ದ ವೈದಿಕರು, ಅದನ್ನು ಕಣ್ಣಿಗೆ ಕಾಣದ, ಕಾಲ್ಪನಿಕ ದೇವರಿಗೆ ಜೋಡಿಸುವ ಮೂಲಕ ಅದರ ಅರ್ಥವನ್ನು ಬದಲಾಯಿಸಿದವು.
ಜ್ಞಾನೋದಯದ ನಂತರ, ಸಿದ್ಧಾರ್ಥನನ್ನು ಅವನ ಎಲ್ಲಾ ಶಿಷ್ಯರು ಮತ್ತು ಅನುಯಾಯಿಗಳು ಭಗವಾನ್ ಎಂದು ಕರೆಯುತ್ತಿದ್ದರು. ಎರಡನೇ ಸಂಗೀತ ನಂತರ, ಎಲ್ಲಾ ಸನ್ಯಾಸಿಗಳು ಅವನನ್ನು ‘ಬುದ್ಧ’ ಎಂದು ಕರೆದರು. ಧಮ್ಮಪದದಲ್ಲಿರುವ ಪ್ರತೀತ್ಯ ಸಮುತ್ಪಾದ ಸಿದ್ಧಾಂತವು ಹೀಗೆ ಹೇಳುತ್ತದೆ: “ಮನೋ ಪುಬ್ಬಂಗಮಾ ಧಮ್ಮ (ಎಲ್ಲಾ ಧರ್ಮಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ)” ಮನೋ ಸೇತ ಮನೋಮಯ (ಎಲ್ಲಾ ಧರ್ಮಗಳ ಮೂಲ ಮನಸ್ಸು) ಮನಸಾ ಚೆ ಪಡುತೇನ (ದುಷ್ಟ ಉದ್ದೇಶದಿಂದ ಯೋಚಿಸಿದರೂ ಸಹ) ಭಾ ಸತಿವ ಕರೋತಿವ (ಮಾತನಾಡಿದರೂ ಅಥವಾ ಮಾಡಿದರೂ) ತತೋನಂ ದುಃಖ: ಮನ್ವೇತಿ (ಗೂಳಿಯ ಪಾದಗಳನ್ನು ಅನುಸರಿಸುವವನು) ಕಾರಣ ಮತ್ತು ಪರಿಣಾಮ ಸಂಬಂಧವಿಲ್ಲದೆ ಏನೂ ಸಂಭವಿಸುವುದಿಲ್ಲ ಎಂಬುದು ಇದರ ಸ್ಥೂಲ ಅರ್ಥ. (ಬಂಡಿಯ ಚಕ್ರದಂತೆ ದುಃಖವು ಹಿಂಬಾಲಿಸುತ್ತದೆ). ಮನಸ್ಸಿನಲ್ಲಿರುವ ಆಲೋಚನೆಗಳ ಮೇಲೆ ಫಲಿತಾಂಶಗಳು ಅವಲಂಬಿತವಾಗಿವೆ ಎಂದು ಬುದ್ಧ ಹೇಳಿದನು. ನೀವು ಯಾವ ಬೀಜಗಳನ್ನು ಬಿತ್ತುವಿರೋ, ಅದೇ ಬೆಳೆ ಬರುತ್ತದೆ, ಅಲ್ಲವೇ? ಆದ್ದರಿಂದ, ಯಾವಾಗಲೂ ಒಳ್ಳೆಯ ಆಲೋಚನೆಗಳನ್ನು ಹೊಂದಿರುವುದು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದು ಇದರ ಸಾರವಾಗಿದೆ. ಕೆಟ್ಟ ಆಲೋಚನೆಗಳನ್ನು ಹೊಂದಿ, ಒಳ್ಳೆಯವರಂತೆ ವರ್ತಿಸುವವರಿಂದ ಯಾವುದೇ ಒಳ್ಳೆಯದಾಗುವುದಿಲ್ಲ. ಕೆಟ್ಟ ಸಂಗತಿಗಳು ಸಂಭವಿಸುತ್ತವೆ. ಫಲಿತಾಂಶ ದುಃಖಕ್ಕೆ ದಾರಿಯಾಗುತ್ತದೆ. (ಉದಾಹರಣೆ- ಮೇಲೆ ಹೇಳಿದಂತೆ ಎತ್ತಿನ ಬಂಡಿ). ಪ್ರಾಮಾಣಿಕವಾಗಿ ಒಳ್ಳೆಯ ಆಲೋಚನೆಗಳನ್ನು ಮಾಡುವ, ಒಳ್ಳೆಯ ಕಾರ್ಯಗಳನ್ನು ಮಾಡುವವರು ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾರೆ. ದುಃಖ ಅವರಿಂದ ದೂರವಿರುತ್ತದೆ. ಅವರನ್ನು ತಲುಪುವುದಿಲ್ಲ. ನಾವು ಈಗ ಮಾನವತಾವಾದಿಗಳು ಮತ್ತು ವಿಚಾರವಾದಿಗಳಾಗಿ ಯೋಚಿಸಿದರೆ, ಸ್ವರ್ಗವನ್ನು ಬಯಸುವವರಿಗೆ ಮೆದುಳು ಶೇಕಡಾ ಶೂನ್ಯ ಮತ್ತು ವಿಶ್ವಾಸ ಶೇಕಡಾ ನೂರರಷ್ಟಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಅದೇ ರೀತಿ, ಸ್ವರ್ಗವನ್ನು ತಿರಸ್ಕರಿಸುವವರ ಮೆದುಳು ಶೇಕಡಾ ನೂರರಷ್ಟು ವಿಶ್ವಾಸ ಶೇಕಡಾ ಶೂನ್ಯ ಎಂಬುದು ಸಾಬೀತಾಗುತ್ತದೆ. ದೇವರು ಇದ್ದಾನೋ ಇಲ್ಲವೋ? ಎಂಬ ಅನುಮಾನಗಳಿಂದ ನಿರಂತರವಾಗಿ ಹೊಡೆದಾಡಿಕೊಳ್ಳುವುದಕ್ಕಿಂತ ತಾನು ಮನುಷ್ಯ ಹೌದಾ/ಅಲ್ಲವಾ ಎಂಬುದರ ಬಗ್ಗೆ ಯೋಚಿಸುವುದು ಒಳ್ಳೆಯದು. ತನ್ನ ಆಲೋಚನೆಗಳೆಲ್ಲವೂ ಮಾನವ ಕೇಂದ್ರಿತ ಮತ್ತು ವೈಜ್ಞಾನಿಕವಾಗಿದೆಯೇ ಇಲ್ಲವೇ? ಅದರ ಬಗ್ಗೆ ಯೋಚಿಸುವುದು ಒಳ್ಳೆಯದು. ಆ ದಿಕ್ಕಿನಲ್ಲಿ ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕಿದೆ. ಬದುಕಿದಷ್ಟು ಕಾಲ ಜೀವನದ ನೋವು, ಸಂಕಟ ಮತ್ತು ಕಷ್ಟಗಳನ್ನು ನಿವಾರಿಸುವ ಒಂದು ಧರ್ಮವೂ ಇಲ್ಲ. ಆದರೆ, ಮರಣದ ನಂತರ ಆರಾಮದಾಯಕ ಜೀವನ ಮತ್ತು ಸ್ವರ್ಗೀಯ ಸುಖವನ್ನು ಒದಗಿಸಲು ಎಲ್ಲಾ ಧರ್ಮಗಳು ಸ್ಪರ್ಧಿಸುತ್ತಿವೆ. ಜೀವನದಲ್ಲಿ ದುಃಖ ಇದೆ. ಅದಕ್ಕೆ ಒಂದು ಪರಿಹಾರವುಇ ಇದೆ ಎಂದು ಹೇಳಿದ ಏಕೈಕ ಧರ್ಮ ಎಂದರೆ ಅದು ಬೌದ್ಧ ಧರ್ಮ ಮಾತ್ರವೇ!
ಒಂದು ಕಾಲದಲ್ಲಿ, ಬೌದ್ಧ ಸನ್ಯಾಸಿಗಳು ಮಠಗಳಲ್ಲಿ ಜನರಿಗೆ ನೀತಿ ಕಥೆಗಳು ಮತ್ತು ಜಾತಕ ಕಥೆಗಳನ್ನು ಬೋಧಿಸುತ್ತಿದ್ದರು. ನಂತರದ ಪೀಳಿಗೆಗೆ ಬೌದ್ಧ ರಾಜರು ಬೌದ್ಧ ಜಾತಕ ಕಥೆಗಳ ಸಾರ ಮತ್ತು ನೀತಿಶಾಸ್ತ್ರವನ್ನು ಉತ್ತೇಜಿಸಲು ಶಿಲ್ಪಗಳನ್ನು ಸೇರಿಸಿದರು. ನಂತರ ಬಂದ ವೈದಿಕರು ಆ ಶಿಲ್ಪಗಳಿಗೆ ಹೊಸ ಕಥೆಗಳನ್ನು ಹೆಣೆದು – ಈ ದೇಶ ಒಂದು ಕಾಲದಲ್ಲಿ ಬೌದ್ಧ ದೇಶವಾಗಿತ್ತು ಎಂದು ಹೇಳಿದರೆ ಕೇಳಿ ಸಹಿಸಲಾರದಷ್ಟು ಮೂಢನಂಬಿಕೆಗಳಲ್ಲಿ ಮುಳುಗಿ ಆನಂದಿಸುತ್ತಿರುವ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಧರ್ಮ ಹಾಗೂ ಮತ್ತು (ಅಮಲು) ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಆಧುನಿಕ ಕಾಲದಲ್ಲೂ ಸಹ, ಪ್ರತ್ಯೇಕವಾಗಿ ನೋಡುತ್ತಿದ್ದೇವೆ. ವಜ್ರಪಾಣಿ, ದಮ್ಮಪಾಣಿ, ಮಹಾಮಾಯೆ, ತಾರಾದೇವಿ, ಮಂಜುಶ್ರೀ, ಹರಿಕಾ, ಮತ್ತು ಅಪರಾಜಿತಾಳ ದೇವಾಲಯಗಳು ಮತ್ತು ಮಠಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತಿಸಿದರು. ಬ್ರಾಹ್ಮಣರು ಬೋಧಿಸತ್ವ ವಜ್ರಪಾಣಿಯನ್ನು ವಿಷ್ಣುವಿನ ಮೂರ್ತಿಯನ್ನಾಗಿ ಪರಿವರ್ತಿಸಿ ವಜ್ರಪಾಣಿ ಎಂದು ಬಡ್ತಿ ನೀಡಿದರು. ನಿಜವಾದ ಅಂಶವೆಂದರೆ – ಉದರ ಪೋಷಣಾರ್ಥಂ ಬಹುಕೃತ ವೇಶಂ! (ಹೊಟ್ಟೆ ತುಂಬಿಸಿಕೊಳ್ಳಲು ಬಹುಮುಖಿ ವೇಷ)! ಅವರು ಕಷ್ಟಪಟ್ಟು ಕಾಯಕ ಮಾಡದೆಯೇ ಜೀವನೋಪಾಯಕ್ಕೆ ದಾರಿ ಮಾಡಿಕೊಂಡರು. ಬೌದ್ಧ ಸ್ತೂಪವೆಂದು ತಿಳಿದಿದ್ದರೂ ಸನಾತನ ಶಿವಲಿಂಗವೆಂದು ಪೂಜಿಸುವ ಮೂರ್ಖಶಿಖಾಮಣಿಗಳು, ಸ್ತೂಪದ ಮೇಲೆ ಸಾಲುಗಳಲ್ಲಿ ಕೆತ್ತಲಾದ ಬುದ್ಧನ ಚಿತ್ರಗಳನ್ನು ನೋಡಲು ಅಸಮರ್ಥರಾಗಿದ್ದಾರೆ. ಅರಿಶಿನ, ಕುಂಕುಮ, ಹೂಮಾಲೆಗಳು, ಆಭರಣಗಳು, ಧೂಪ, ಸಂಬ್ರಾಣಿ ಇತ್ಯಾದಿ ಏಕೆ? ಅಂದರೆ, ಅವೆಲ್ಲವೂ ಬೌದ್ಧ ಪ್ರತಿಮೆಯ ರೂಪುರೇಷೆಯನ್ನು ಮರೆಮಾಡಲು ಮಾತ್ರವೇ! ಸೋಮನಾಥ ದೇವಾಲಯದ ಕೆಳಗೆ ಬೌದ್ಧ ಗುಹೆಗಳಿವೆ. ಬ್ರಾಹ್ಮಣರು ಈ ದೇವಾಲಯವನ್ನು ಬೌದ್ಧರಿಗೆ ನೀಡುತ್ತಾರೆಯೇ? “ಕೀರ್ತಿ ಮುಖ” ಎಂಬುದು ಬೌದ್ಧ ಶಿಲ್ಪಗಳಲ್ಲಿ ಕಂಡುಬರುವ ಒಂದು ವೈಶಿಷ್ಟ್ಯವಾಗಿದೆ. ವೈದಿಕ ವಿದ್ವಾಂಸರು ಅದರ ಹೆಸರನ್ನು ಬದಲಾಯಿಸಿ ‘ದೃಷ್ಟಿಗೊಂಬೆ’ ಎಂದು ಪ್ರಚಾರ ಮಾಡಿದರು. ಈ ಗೊಂಬೆಯನ್ನು ಇನ್ನೂ ದೇಶಾದ್ಯಂತ ಮನೆಗಳ ಮುಂದೆ ಇರಿಸಲಾಗುತ್ತದೆ. ಅದು ದೃಷ್ಟಿಗೊಂಬೆ ಅಲ್ಲ. ಬೌದ್ಧ ಶಿಲ್ಪದಿಂದ ಕೆತ್ತಲಾದ ‘ಕೀರ್ತಿಮುಖ’ವೆಂದು ಜನರು ಗುರುತಿಸಲು ಅಸಮರ್ಥರಾದರು. ಇದರರ್ಥ ಸುಳ್ಳು ಪ್ರಚಾರದ ವ್ಯಾಪ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಡಿಸೆಂಬರ್ 25, 1954 ರಂದು, ಪುಣೆ ಬಳಿಯ ದೇಹು ರಸ್ತೆಯಲ್ಲಿರುವ ಹೊಸದಾಗಿ ನಿರ್ಮಿಸಲಾದ ಬುದ್ಧ ವಿಹಾರದಲ್ಲಿ ಬುದ್ಧನ ಪ್ರತಿಮೆಯನ್ನು ಅನಾವರಣಗೊಳಿಸುತ್ತಾ.., ಅಂಬೇಡ್ಕರ್ ಹೀಗೆ ಹೇಳಿದರು: “ಪಂಢರಿಪುರದಲ್ಲಿರುವ ವಿಠ್ಠಲನ ಪ್ರತಿಮೆ ವಾಸ್ತವವಾಗಿ ಬುದ್ಧನ ಪ್ರತಿಮೆಯೇ ಆಗಿದೆ.” – ಎಂದು! ‘ಪುಂಡಲೀಕ’ ಎಂಬ ಪದದಿಂದ ‘ಪಾಂಡುರಂಗ’ ಎಂಬ ಪದ ಬಂದಿದೆ. ಪುಂಡಲೀಕ ಎಂದರೆ ಕವಿತೆ. ಪಾಲಿ ಭಾಷೆಯಲ್ಲಿ ಈ ಕವಿತೆಯನ್ನು ‘ಪಾಂಡುರಂಗ’ ಎಂದು ಕರೆಯಲಾಗುತ್ತದೆ. ಆದ್ದರಿಂದ, ಪಾಂಡುರಂಗ ಬುದ್ಧನಲ್ಲದೆ ಬೇರೆ ಯಾರೂ ಅಲ್ಲ. ಭಾರತದಲ್ಲಿ ಬೌದ್ಧಧರ್ಮದ ಅಳಿವಿಗೆ ಕಾರಣ ಇಲ್ಲಿನ ಜನಸಾಮಾನ್ಯರ ಮುಗ್ಧತೆ, ಚಂಚಲ ಸ್ವಭಾವ ಮತ್ತು ಅಜ್ಞಾನವೇ ಆಗಿದೆ. ಬ್ರಾಹ್ಮಣರು ಸೃಷ್ಟಿಸಿದ ಅನೇಕ ದೇವರು ಮತ್ತು ದೇವತೆಗಳನ್ನು ಅವರು ಪೂಜಿಸುತ್ತಾರೆ. ಅವರಿಗೆ ಸತ್ಯ ತಿಳಿದಿಲ್ಲ. ವೈದಿಕ ಧರ್ಮದ ಮುಖಂಡರು ಬೌದ್ಧಧರ್ಮವನ್ನು ನಾಶಮಾಡಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ – (ಹೈದರಾಬಾದ್ ಬುಕ್ ಟ್ರಸ್ಟ್ ಪ್ರಕಟಿಸಿದ “ಭಾರತದಲ್ಲಿ ಬೌದ್ಧಧರ್ಮ” ಪುಸ್ತಕದಿಂದ)
ಬೌದ್ಧರು ಮತ್ತು ಬ್ರಾಹ್ಮಣರ ನಡುವೆ ನಡೆದ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಅಸ್ಪೃಶ್ಯತೆ ಹುಟ್ಟಿತು. ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು, ವೈದಿಕರು ಅಸ್ಪೃಶ್ಯತೆಯನ್ನು ಉತ್ತೇಜಿಸಿ ಪೋಷಿಸಿ ಸಮಾಜವನ್ನು ನಾಶಮಾಡಿದರು. ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದರು. ನಳಂದ ವಿಶ್ವವಿದ್ಯಾಲಯದಿಂದ ಕಾಲ್ನಡಿಗೆಯಷ್ಡು ದೂರದಲ್ಲಿ ಬುದ್ಧನ ಪ್ರತಿಮೆಯೊಂದು ಕಂಡುಬಂದಾಗ, ವೈದಿಕರು ಅದನ್ನು “ರುಕ್ಮಿಣಿ ದೇವಿ” ದೇವಾಲಯವನ್ನಾಗಿ ಪರಿವರ್ತಿಸಿದರು. ಅಲ್ಲಿಯೇ, ಸ್ವಲ್ಪ ದೂರದಲ್ಲಿ ಕಂಡುಬಂದ ಬುದ್ಧನ ಪ್ರತಿಮೆಯೊಂದರ ತಲೆಯ ಮೇಲೆ ಎಣ್ಣೆ ಸುರಿದು “ಥೇಲಿ ಬಾಬಾ” (ಎಣ್ಣೆ ಬಾಬಾ) ಎಂದು ಪ್ರಚಾರ ಮಾಡಿ ಕೆಲವರು ಅಲ್ಲಿ ಪೂಜೆಗಳನ್ನು ಮಾಡಿ ಅಲ್ಲಿಯೇ ಜೀವನವನ್ನು ಕಟ್ಟಿಕೊಂಡರು.
ಮಥುರಾವನ್ನು ಕೃಷ್ಣನ ನಗರ ಎಂದು ಕರೆಯುತ್ತಾರೆ, ಅಲ್ಲವೇ? ಮತ್ತೆ ಅಲ್ಲಿ ಒಂದೇ ಒಂದು ಕೃಷ್ಣನ ಪ್ರತಿಮೆಯೂ ದೊರೆತಿಲ್ಲವೇಕೆ? ಮಥುರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಐದು ಸಾವಿರ ಬುದ್ಧನ ಪ್ರತಿಮೆಗಳು ಪತ್ತೆಯಾಗಿವೆ. ಅವುಗಳನ್ನು ಮಥುರಾ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಇದು ಬೌದ್ಧ ಭೂಮಿ, ಬೌದ್ಧ ಪರಂಪರೆ ಎಂದು ಈ ದೇಶದ ಮಣ್ಣು ಶತಮಾನಗಳಿಂದಲೂ ಘೋಷಿಸುತ್ತಿದೆ. ಎಲ್ಲಿ ಹಗೆದರೂ ಬೌದ್ಧ ಪರಂಪರೆ ಹೊರಹೊಮ್ಮುತ್ತಲೇ ಇದೆ. ಮಥುರಾ – ಕೃಷ್ಣನೆಂಬ ಕಾಲ್ಪನಿಕ ಪಾತ್ರಗಳಿಗೆ ಗಂಟುಕಟ್ಟಿ ಕಟ್ಟುಕಥೆಗಳನ್ನು ಹೆಣೆದು ಪ್ರಚಾರ ಮಾಡಿದರು. ಮಥುರಾದ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರು ಬಯಸಿದರೆ ಇದನ್ನು ವೀಕ್ಷಿಸಬಹುದು. ವಸ್ತು ಸಂಗ್ರಹಾಲಯವು ಬೌದ್ಧ ಶಿಲ್ಪಗಳಿಂದ ತುಂಬಿದೆ, ಆದರೆ ಅಲ್ಲಿ ಕೃಷ್ಣನ ಒಂದೇ ಒಂದು ಪ್ರತಿಮೆಯೂ ಕಂಡುಬಂದಿಲ್ಲ. ಸತ್ಯವು ತಾನು ಸತ್ಯ ಎಂದು ಹೆಮ್ಮೆಪಡುವುದಿಲ್ಲ. ಆದರೆ, ಸುಳ್ಳಿಗೆ ಅದು ಬೇಕಾಗಿದೆ – ಅದು ತಾನೇ ಸತ್ಯ ಎಂದು ಕೂಗುತ್ತಲೇ ಇರುತ್ತದೆ!
(ಮೇ 12, ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ) ಲೇಖಕರು: ತ್ರಿಪುರನೇನಿ ರಾಮಸ್ವಾಮಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ. – ಡಾ. ದೇವರಾಜು ಮಹಾರಾಜ್
ಅನುವಾದ : ರೇಣುಕಾ ಭಾರತಿ
Leave a reply