ಆಕಾಶದಲ್ಲಿ ನಮಗೆ ಪಕ್ಷಿಗಳು, ಗುಬ್ಬಚ್ಚಿಗಳು ಕಾಣುತ್ತಿದ್ದವು. ಆದರೆ ಅವು ಕಾಲಕ್ರಮೇಣ ಅವು ಕಣ್ಮರೆಯಾಗುತ್ತಿವೆ. ಅಪಾರ್ಟ್ ಮೆಂಟ್ ಸಂಸ್ಕೃತಿ ಬಂದ ನಂತರ ಮನೆಗಳ ಮುಂದೆ ಕಾಣುತ್ತಿದ್ದ ಅಪರೂಪದ ಪಕ್ಷಿ ಸಂಪತ್ತು ಮಾಯವಾಗುತ್ತಾ ಬರುತ್ತಿದೆ. ಕಾರ್ಯಕ್ರಮಗಳಲ್ಲಿ ಮಾತ್ರವಲ್ಲ. ಆಕಾಶದತ್ತ ಕಣ್ಣು ಹಾಯಿಸಿದರೆ ಪಕ್ಷಿಗಳಂತೆ ಕಾಣುವ ಡ್ರೋನ್ಗಳು ಹೆಚ್ಚಾಗುತ್ತಿವೆ. ಇದರಿಂದ ಪರಿಸರವಾದಿಗಳು ಆತಂಕಗೊಂಡಿದ್ದಾರೆ.
ನ್ಯೂಡೆಲ್ಲಿ : ದೇಶಾದ್ಯಂತ 29,500 ಡ್ರೋನ್ಗಳನ್ನು ನೋಂದಾಯಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಜನವರಿ 29 ರವರೆಗಿನ ಅಂಕಿಅಂಶಗಳ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು 4,882 ಡ್ರೋನ್ಗಳು ನೋಂದಣಿಯಾಗಿವೆ. ತಮಿಳುನಾಡಿನಲ್ಲಿ 4,588 ಮತ್ತು ಮಹಾರಾಷ್ಟ್ರದಲ್ಲಿ 4,132 ಡ್ರೋನ್ಗಳನ್ನು ನೋಂದಾಯಿಸಲಾಗಿದೆ ಎಂದು ವಿವರಣೆ ನೀಡಲಾಗಿದೆ.
ಡಿಜಿಸಿಎ ನೀಡಿರುವ ಅಂಕಿಅಂಶಗಳ ಪ್ರಕಾರ ಹರಿಯಾಣ, ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ಕೇರಳ ನಂತರದ ಸ್ಥಾನಗಳಲ್ಲಿವೆ. ಇದುವರೆಗೆ, ಡ್ರೋನ್ಗಳಿಗೆ ಸಂಬಂಧಿಸಿದ 96 ರೀತಿಯ ಪ್ರಮಾಣಪತ್ರಗಳನ್ನು DGCA ಜಾರಿ ಮಾಡಿದೆ. ಅವುಗಳಲ್ಲಿ 65 ಮಾದರಿಗಳನ್ನು ಕೃಷಿ ಕ್ಷೇತ್ರದಲ್ಲಿ ಬಳಸಲು ಅನುಮತಿ ನೀಡಿದೆ. ನೋಂದಾಯಿಸಲ್ಪಟ್ಟ ಪ್ರತಿ ಡ್ರೋನ್ಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು DGCA ಜಾರಿ ಮಾಡುತ್ತದೆ.
DGCAಯ ರಿಮೋಟ್ ಪೈಲಟ್ ತರಬೇತಿ ಸಂಸ್ಥೆ (RTPOS) ಇದುವರೆಗೆ 24,466 ರಿಮೋಟ್ ಪೈಲಟ್ ಪ್ರಮಾಣಪತ್ರಗಳನ್ನು ನೀಡಿದೆ. ಡ್ರೋನ್ಗಳನ್ನು ಹಾರಿಸಲು ಸ್ಪೇಸ್ ಮ್ಯಾಪ್ ನಕ್ಷೆಯನ್ನು ಅನುಸರಿಸಬೇಕು. ಎಯಿರ್ ಸ್ಪೇಸ್ ಮ್ಯಾಪ್ ಹಸಿರು, ಹಳದಿ ಮತ್ತು ಕೆಂಪು ವಲಯಗಳನ್ನು ಹೊಂದಿದೆ. ಹಸಿರು ವಲಯದಲ್ಲಿ ಡ್ರೋನ್ ಹಾರಾಟಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ. ಹಳದಿ ವಲಯದಲ್ಲಿ ವಾಯು ಸಂಚಾರ ನಿಯಂತ್ರಣ ಅನುಮತಿ ತೆಗೆದುಕೊಳ್ಳಬೇಕು. ಕೆಂಪು ವಲಯದಲ್ಲಿ ಡ್ರೋನ್ಗಳನ್ನು ಹಾರಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Leave a reply