ಅರ್ಥಶಾಸ್ತ್ರವನ್ನು
ಅರ್ಥಮಾಡಿಕೊಳ್ಳಲು
ಬೇಕಿರುವುದು ಪಾಂಡಿತ್ಯವಲ್ಲ…
ಕಾಪೋರೇಟುಗಳ ಲಾಭವೆಂದರೆ…
ಕಾರ್ಮಿಕರಿಂದ
ಕದ್ದ ಕೂಲಿ ಎಂಬ
ಪ್ರಜ್ಞೆ
ಕೃಷಿ ಬಿಕ್ಕಟೆಂದರೆ…
ಒಂಟಿ ರೈತನ ಮೇಲೆ ಮಾರುಕಟ್ಟೆಯ
ಸಂಘಟಿತ ದಾಳಿ ಎಂಬ
ಕರುಣಾ …
ವಿದೇಶಿ ವಿನಿಮಯ
ಬಿಕ್ಕಟೆಂದರೆ….
ಉಳ್ಳವರ ವಿಲಾಸದ
ಆಮದಿಗೆ
ಇಲ್ಲದವರ ಬದುಕಿನ
ರಫ್ತು ಎಂಬ
ಶೀಲ…
ಪ್ರಜ್ಞೆಯಿಲ್ಲದ ರಾಜಕೀಯ..
ಶೀಲವಿಲ್ಲದ ಆರ್ಥಿಕತೆ..
ಕರುಣವಿಲ್ಲದ ಪಾಂಡಿತ್ಯ..
ಕಟ್ಟುವುದು ದೇಶವನ್ನಲ್ಲ…
ರುದ್ರ ರಮಣೀಯ
ಭವ್ಯ ದೈತ್ಯ
ಮಸಣಗಳನ್ನು….
- ಶಿವಸುಂದರ್
ಜನಪರ ಚಿಂತಕರು, ಲೇಖಕರು..
Leave a reply